ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ವಾರಾಹಿ ಕಾಮಗಾರಿ ʼಅಂತ್ಯʼವಾದರೂ ಸಮಸ್ಯೆ ಜೀವಂತ

ಕುಂದಾಪುರ: ಇಲ್ಲಿನ ಕಾಳವಾರ ಸಮೀಪದ ಕಕ್ಕೇರಿ ಜನತಾ ಕಾಲೋನಿ ಸಮೀಪದ ವಾರಾಹಿ ಕಾಮಗಾರಿ ಮುಗಿದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಕಳಪೆ ಕಾಮಗಾರಿಯಿಂದ ವಾರಾಹಿ ಚಾನಲ್ ಕುಸಿದಿದ್ದು ಎಡದಂಡೆಗಳು ಇಂದೋ ನಾಳೆಯೋ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.

ಅಲ್ಲದೆ, ವಾರಾಹಿ ಕಾಲುವೆ ಸಮೀಪದ ಖಾಸಗಿ ಜಾಗವನ್ನು ಸರ್ವಿಸ್ ರಸ್ತೆ ಮಾಡಲು ವಶಪಡಿಸಿಕೊಂಡಿದ್ದರೂ ಯಾವುದೇ ಒಂದು ಸರ್ವಿಸ್ ರಸ್ತೆ ಕಾಮಗಾರಿ ಇದುವರೆಗೂ ಆರಂಭಗೊಂಡಿಲ್ಲ. ಅನೇಕ ಬಾರಿ ಇಂಜಿನಿಯರ್ ಗಮನಕ್ಕೆ ತಂದರೂ ಪ್ರಯೋಜನವಾಗದೆ ಇರೋದು ವಿಪರ್ಯಾಸ. ಒಟ್ಟಾರೆ ವಾರಾಹಿ ಯೋಜನೆ ಬಂದರೂ ಸ್ಥಳೀಯರಿಗೆ ಉತ್ತಮ ರಸ್ತೆ ಕಲ್ಪಿಸುವ ಭರವಸೆ ನೀಡಿ ಇಲಾಖೆ ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Edited By : Shivu K
Kshetra Samachara

Kshetra Samachara

20/04/2022 07:46 am

Cinque Terre

20.18 K

Cinque Terre

0

ಸಂಬಂಧಿತ ಸುದ್ದಿ