ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕುಕ್ಕಿಕಟ್ಟೆ- ಕೊಲ್ಲೂರು ಪದವು ಅಸಮರ್ಪಕ ಕಾಂಕ್ರೀಟ್ ರಸ್ತೆ ಕಾಮಗಾರಿ; ನಾಗರಿಕರ ಆಕ್ರೋಶ

ಮುಲ್ಕಿ: ಸುಮಾರು ಮೂರುವರೆ ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಗೊಳ್ಳುತ್ತಿರುವ ಬಪ್ಪನಾಡು ಎಳಿಂಜೆ ಲೋಕೋಪಯೋಗಿ ರಸ್ತೆಯ ಕುಕ್ಕಿಕಟ್ಟೆ ಜಂಕ್ಷನ್ ಬಳಿ ಯಿಂದ ಕೊಲ್ಲೂರು ಪದವು ವರೆಗೆ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟ್ ಕಾಮಗಾರಿ ಅಸಮರ್ಪಕವಾಗಿದ್ದು ಈಗಾಗಲೇ ಕೆಲ ಕಡೆ ಕಾಂಕ್ರೀಟ್ ಬಿರುಕು ಬಿಟ್ಟಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.

ಗ್ರಾಮಸ್ಥರಾದ ವಕೀಲ ಹಾಗೂ ನೋಟರಿ ಬಿಪಿನ್ ಪ್ರಸಾದ್ ಮಾತನಾಡಿ ಕೋಟಿ ವೆಚ್ಚದ ಕಾಮಗಾರಿ ಅಸಮರ್ಪಕ ರೀತಿಯಲ್ಲಿ ನಡೆದಿದ್ದು ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಕೃತಕ ನೆರೆ ಹಾಗೂ ಕೃಷಿ ಹಾನಿ ಭೀತಿ ಎದುರಾಗಿದೆ. ಅರ್ಧಂಬರ್ಧ ಕಾಮಗಾರಿಯಿಂದ ಮಳೆಗಾಲದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ಇದ್ದು ಕೂಡಲೇ ಗುತ್ತಿಗೆದಾರರು ಸೂಕ್ತ ಒಳಚರಂಡಿ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಾಜಿ ಪಂಚಾಯತ್ ಸದಸ್ಯೆ ಇಂದಿರಾ ಮಾತನಾಡಿ ಅಸಮರ್ಪಕ ಕಾಮಗಾರಿಯಿಂದ ಅಂಚೆ ಕಚೇರಿ ಬಳಿ ಅವ್ಯವಸ್ಥೆಗಳ ಆಗರವಾಗಿದ್ದು ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ನಾಗರಿಕರ ಆರೋಪಕ್ಕೆ ಬಳ್ಕುಂಜೆ ಪಂಚಾಯತ್ ಸದಸ್ಯ ಆನಂದ ಕೊಲ್ಲೂರು ಪದವು ಸ್ಪಷ್ಟನೆ ನೀಡಿ ಅಸಮರ್ಪಕ ಕಾಮಗಾರಿ ಬಗ್ಗೆ ನಾಗರಿಕರಿಂದ ದೂರುಗಳು ಬಂದಿದ್ದು ಗುತ್ತಿಗೆದಾರರ ಬಳಿ ಚರ್ಚಿಸಲಾಗಿದ್ದು

ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.ಗುತ್ತಿಗೆದಾರರು ಚರಂಡಿ ವ್ಯವಸ್ಥೆ ಕಲ್ಪಿಸದಿದ್ದರೆ ಪಂಚಾಯತ್ ವತಿಯಿಂದ ಕಾಮಗಾರಿ ನಡೆಸಲಾಗುವುದು ಎಂದರು.

Edited By : Shivu K
Kshetra Samachara

Kshetra Samachara

08/04/2022 12:32 pm

Cinque Terre

20.47 K

Cinque Terre

0

ಸಂಬಂಧಿತ ಸುದ್ದಿ