ಕಾರ್ಕಳ: ತಾಲೂಕಿನ ಅಜೆಕಾರು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಜಲ್ಲಿ ಕ್ರಷರ್ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.ಗ್ರಾಮಸ್ಥರ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಸಾಥ್ ನೀಡಿದೆ.
ಜಲ್ಲಿ ಕ್ರಷರ್ ನಲ್ಲಿ ಸ್ಪೋಟಿಸಲು ಬಳಸುವ ಸ್ಫೋಟಕಗಳಿಂದ ಈ ಭಾಗದ ಅನೇಕ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ.ಮಾತ್ರವಲ್ಲ ,ಅಕ್ಕಪಕ್ಕದ ಕೃಷಿ ಜಮೀನಿಗೂ ಕಲ್ಲಿನ ಪುಡಿ ಜೊತೆಗೆ ಕಲುಷಿತ ನೀರು ಹರಿದು ಹಾನಿಯುಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸ್ಥಳೀಯರಾದ ಹರೀಶ್ ಶೆಟ್ಟಿ ಎಂಬವರ ಮಾಲಕತ್ವದಲ್ಲಿ ಈ ಜಲ್ಲಿ ಕಲ್ಲಿನ ಕ್ರಷರ್ ನಡೆಯುತ್ತಿದ್ದು ,
ಕ್ರಷರ್ ಕಾರ್ಯಾಚರಣೆಯನ್ನು ಕೂಡಲೇ ಸ್ನೇಹಿತ ಗೊಳಿಸುವಂತೆ ತಹಶೀಲ್ದಾರ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
Kshetra Samachara
05/04/2022 08:54 pm