ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪೆರಾರ: ರಸ್ತೆಯ ಅಂಚಿನಲ್ಲೊಂದು ಅಪಾಯಕಾರಿ ಹೊಂಡ

ಬಜಪೆ: ಬಜಪೆ-ಕೈಕಂಬ ರಾಜ್ಯ ಹೆದ್ದಾರಿಯ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಿಕಾನಗರ ತಿರುವಿನ ರಸ್ತೆಯ ಅಂಚಿನಲ್ಲಿ ತಗ್ಗು ಬಿದ್ದಿದೆ. ಇದು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ರಸ್ತೆಯಂಚಿನ ಹೊಂಡದ ಸಮೀಪ ಬ್ಯಾರೀಕೇಡ್‌ಗಳನ್ನು ಇಡಲಾಗಿತ್ತು.

ಆದರೆ ಇದೀಗ ಆ ಬ್ಯಾರೀಕೇಡ್‌ಗಳು ಹೊಂಡಕ್ಕೆ ಬಿದ್ದಿದೆ. ರಸ್ತೆಯಂಚಿನಲ್ಲಿಯೇ ಹೊಂಡ ಇರೋದ್ರಿಂದ ವಾಹನ ಸವಾರರಿಗೆ ಬಹಳಷ್ಟು ಅಪಾಯಕಾರಿಯಾಗಿದೆ. ಅಲ್ಲದೆ ಹೊಂಡದ ಸಮೀಪ ಯಾವುದೇ ಎಚ್ಚರಿಕೆ ಫಲಕವನ್ನು ಕೂಡ ಆಳವಡಿಸಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

24/03/2022 04:26 pm

Cinque Terre

3.91 K

Cinque Terre

0

ಸಂಬಂಧಿತ ಸುದ್ದಿ