ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡೇಂಜರಸ್ ರಸ್ತೆ ಸರಳು ತೆರವುಗೊಳಿಸಿದ ಸಾರ್ವಜನಿಕರು!

ಪಬ್ಲಿಕ್ ನೆಕ್ಸ್ಟ್ ಫಲಶ್ರುತಿ

ಉಡುಪಿ: ನಗರದ ಕನಕದಾಸ ರಸ್ತೆ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಸರಳುಗಳು ಹೊರಬಂದು ಅಪಾಯ ಆಹ್ವಾನಿಸುತ್ತಿದ್ದವು. ವಾಹನ ನಿಬಿಡ ರಸ್ತೆ ಇದಾಗಿದ್ದು, ಹಲವು ದಿನಗಳಿಂದ ಈ ಪರಿಸ್ಥಿತಿ ಇತ್ತು. ಈಗಾಗಲೇ ಇಲ್ಲಿ ಹಲವು ಪಾದಚಾರಿಗಳು ಗಾಯಾಳಾಗಿರುವ ಘಟನೆ ನಡೆದಿದ್ದವು. ಈ ಸಂಬಂಧ ನಗರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

2 ದಿನಗಳ ಹಿಂದೆ 'ಪಬ್ಲಿಕ್ ನೆಕ್ಸ್ಟ್' ಸಾರ್ವಜನಿಕ ಹಿತದೃಷ್ಟಿಯಿಂದ ಈ ಕುರಿತು ವರದಿ ಪ್ರಸಾರ ಮಾಡಿತ್ತು. ರಸ್ತೆಯಿಂದ ಹೊರ ತೂರಿ ಬಂದಿರುವ ಸರಳುಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಮನವಿ ಮಾಡಿಕೊಂಡಿತ್ತು. ಆದರೆ, ನಗರಸಭೆ ಸ್ಪಂದಿಸಿರಲಿಲ್ಲ. ನಗರದ ಪ್ರಮುಖ ರಸ್ತೆಯಿಂದ ಹೊರಬಂದಿರುವ ಸರಳುಗಳ ಅಪಾಯವನ್ನರಿತ ಸಾರ್ವಜನಿಕರು ಇವತ್ತು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ತೆರವು ಕಾರ್ಯಾಚರಣೆ ನೇತೃತ್ವವನ್ನು ಜಿಲ್ಲಾ ನಾಗರಿಕ ಸಮಿತಿ ವಹಿಸಿತ್ತು. ಜೊತೆಗೆ ಸ್ಥಳೀಯ ಅಂಗಡಿಯವರು, ಆಟೋ ಚಾಲಕರು ಸೇರಿ ಅಪಾಯಕಾರಿ ಸರಳುಗಳನ್ನು ತೆರವುಗೊಳಿಸಿದರು. 'ಪಬ್ಲಿಕ್ ನೆಕ್ಸ್ಟ್' ಸಾರ್ವಜನಿಕರ ಸಮಸ್ಯೆಗಳತ್ತ ಇದೇ ರೀತಿ ಗಮನ ಹರಿಸಿ ಪರಿಹಾರ ಸೂಚಿಸುವ ತನ್ನ ಸಾಮಾಜಿಕ ಬದ್ಧತೆ ಮುಂದುವರೆಸಲಿದೆ.

-ರಹೀಂ ಉಜಿರೆ ಪಬ್ಲಿಕ್ ನೆಕ್ಸ್ಟ್ ಉಡುಪಿ

Edited By : Shivu K
Kshetra Samachara

Kshetra Samachara

27/02/2022 12:00 pm

Cinque Terre

9.36 K

Cinque Terre

2

ಸಂಬಂಧಿತ ಸುದ್ದಿ