ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಖಾಸಗಿ ಜಾಗದಲ್ಲಿ ಉಚ್ಚಿಲ ಬಡಾ ಗ್ರಾಪಂ ತ್ಯಾಜ್ಯ ಡಂಪ್ ; ಸಾರ್ವಜನಿಕರಿಂದ ರಸ್ತೆ ತಡೆ

ಕಾಪು: ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಪೊಲ್ಯ ರಸ್ತೆಯ ಬಳಿ ತ್ಯಾಜ್ಯ ಡಂಪ್ ಮಾಡಲು ಗ್ರಾಪಂ ನಿರ್ಧರಿಸಿದ್ದು, ಟೆಂಪೋದಲ್ಲಿ ತ್ಯಾಜ್ಯ ಸುರಿಯುತ್ತಿದ್ದ ಸಂದರ್ಭ ಗ್ರಾಮಸ್ಥರು ತಡೆದಿದ್ದಾರೆ.

ಪೊಲ್ಯದಲ್ಲಿ ತ್ಯಾಜ್ಯವನ್ನು ಟೆಂಪೋದಿಂದ ಹಾಕುತ್ತಿದ್ದ ವೇಳೆ ತ್ಯಾಜ್ಯ ಘಟಕದ ಗುತ್ತಿಗೆ ವಹಿಸಿಕೊಂಡ ಮಹಿಳೆ ಹಾಗೂ ಸ್ಥಳೀಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಗ್ರಾಮಸ್ಥರು ರಸ್ತೆ ತಡೆ ನಡೆಸಿ, ಸುರಿದ ತ್ಯಾಜ್ಯವನ್ನು ಪುನಃ ಟೆಂಪೋಗೆ ತುಂಬಿಸುವಲ್ಲಿ ಯಶ ಕಂಡರು.

ಸ್ಥಳಕ್ಕೆ ಪಡುಬಿದ್ರಿ ಠಾಣಾಧಿಕಾರಿ ಅಶೋಕ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಖಾಸಗಿ ಜಾಗದಲ್ಲಿ ಡಂಪ್ ಮಾಡಲು ಆದೇಶಿಸಿದ ಪಿಡಿಒ ಕುಶಾಲಿನಿ ಸ್ಥಳಕ್ಕೆ ಕರೆಸಿ ಮಾಹಿತಿ ಪಡೆದುಕೊಂಡು, ಸ್ಥಳೀಯರ ಮನವೊಲಿಸಿ ಟೆಂಪೋವನ್ನು ಸ್ಥಳದಿಂದ ತೆರವುಗೊಳಿಸಿದರು.

ಬಡಾ ಗ್ರಾಪಂ ಅಧ್ಯಕ್ಷೆ ಜ್ಯೋತಿ ಗಣೇಶ್, ಗ್ರಾಪಂ ಸದಸ್ಯರು, ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ ಪೊಲ್ಯ ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

27/02/2022 10:09 am

Cinque Terre

9.66 K

Cinque Terre

0

ಸಂಬಂಧಿತ ಸುದ್ದಿ