ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರ್ವ ಗ್ರಾಮ ಪಂಚಾಯತ್: ಸಂಜೀವಿನಿ ಮಹಿಳಾ ಗ್ರಾಮ ಸಭೆ

ಶಿರ್ವ: ಶಿರ್ವ ಗ್ರಾಮ ಮಟ್ಟದ ಶೃಂಗಾರ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ ಹಾಗೂ ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ಮಹಿಳಾ ಗ್ರಾಮಸಭೆಯು ಇಂದು ಶಿರ್ವ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಆರ್ .ಪಾಟ್ಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಗಾಯತ್ರಿ ಸಂತೋಷ್ ಅವರು ಕ್ಯಾನ್ಸರ್ ಸಪ್ತಾಹದ ಕುರಿತು ಮಾಹಿತಿ ಹಾಗೂ ಕ್ಯಾನ್ಸರ್ ಕಾಯಿಲೆಯ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ , ಹಾಗೂ ಡಾ.ನಿಶಾ ಅವರು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಕಾಯಿಲೆಯ ಕುರಿತು ಮಾಹಿತಿ ನೀಡಿದರು.

ಮಹಿಳಾ ದೌರ್ಜನ್ಯದ ಕುರಿತು ಸಖಿ ಒನ್ ಸ್ಟಾಪ್ ಸೆಂಟರ್ ನ ಪ್ರಮೀಳಾ ಅವರು ಮಾಹಿತಿ ನೀಡಿದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಶೈಲಾ ಅವರು ಸಮಗ್ರ ಮಾಹಿತಿಯನ್ನು ಮಹಿಳೆಯರಿಗೆ ನೀಡಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಸಂಜೀವಿನಿ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಬಹಳಷ್ಟು ಕಾರ್ಯಕ್ರಮಗಳಿವೆ.ಇವುಗಳಲ್ಲಿ ಸಂಜೀವಿನಿ ಸಂತೆಯೂ ಒಂದು.ಇದರ ಪ್ರಯೋಜನವನ್ನು ಎಲ್ಲಾ ಸದಸ್ಯರೂ ಪಡೆದುಕೊಳ್ಳಿ,ಹೊಸ ಗುಂಪುಗಳು ಇನ್ನಷ್ಟು ಹುಟ್ಟಿಕೊಳ್ಳಲಿ ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಕೆ.ಆರ್.ಪಾಟ್ಕರ್ ಅವರು ಈ ಸಭೆಯಲ್ಲಿ ಪಡೆದುಕೊಂಡಿರುವ ಇಲಾಖಾವಾರು ಮಾಹಿತಿಗಳನ್ನು ಸದಸ್ಯರು ಸದುಪಯೋಗ ಪಡಿಸಿಕೊಂಡು,ಇತರರಿಗೂ ತಿಳಿಸಬೇಕು.ಏನಾದರೂ ಸಮಸ್ಯೆಗಳಿದ್ದಲ್ಲಿ ತಾವು ನೇರವಾಗಿ ಗ್ರಾಮ ಪಂಚಾಯತ್ ಗೆ ತಿಳಿಸಿ.ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಾವು ಸದಾ ಬದ್ಧರಾಗಿದ್ದೇವೆ ಎಂದು ನುಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಪ್ರಾಸ್ತಾವಿಕ ಮಾತನಾಡಿ,ಸರ್ವರನ್ನೂ ಸ್ವಾಗತಿಸಿದರು.

ಕಾರ್ಯದರ್ಶಿ ಶ್ ಮಂಗಳಾ ಅವರು ಧನ್ಯವಾದವಿತ್ತರು.ಒಕ್ಕೂಟದ ಪದಾಧಿಕಾರಿಗಳಾದ ಶ್ರೀಮತಿ ಆಶಾ ಆಚಾರ್ಯ,ದಿವ್ಯಾ ಸಂತೋಷ್,ಸುರೇಖಾ, ಸುಪ್ರೀತಾ, ಬರಹಗಾರರಾದ ಶ್ವೇತಾ, ಸಂಪನ್ಮೂಲ ವ್ಯಕ್ತಿಗಳಾದ ಸುಜಾತ, ಶಶಿಕಲಾ,ಸಂಗೀತಾ, ಬಿ.ಸಿ.ಸಖಿ ಸುಮಾ ಬಾಮನ್ ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

14/02/2022 09:09 pm

Cinque Terre

3.4 K

Cinque Terre

0

ಸಂಬಂಧಿತ ಸುದ್ದಿ