ಬಜಪೆ: ನಿಡ್ಡೋಡಿಯಿಂದ ಕಟೀಲಿಗೆ ಸಂಪರ್ಕಿಸುವ ರಸ್ತೆಯ ಆಂದಳಿಕೆ ಸಮೀಪದ ತಿರುವಿನ ರಸ್ತೆ ಅಂಚಿನಲ್ಲಿ ಕಸದ ರಾಶಿಯೇ ಬಿದ್ದು, ದುರ್ನಾತ ಪರಿಸರವಿಡೀ ಹರಡಿದೆ. ಇಲ್ಲಿಂದ ಮುಂದೆ ಸಾಗಿದಾಗ ದಡ್ಡು ಚರ್ಚ್ ಗೆ ಸಂಪರ್ಕಿಸುವ ರಸ್ತೆ ತಿರುವಿನ ಅಂಚಿನಲ್ಲಿರುವ ಕಸ-ತ್ಯಾಜ್ಯವನ್ನೂ ತಿಂಗಳುಗಟ್ಟಳೆ ವಿಲೇವಾರಿ ಮಾಡದ್ದರಿಂದ ʼಕಸ ಗುಡ್ಡೆʼಯೇ ಸೃಷ್ಟಿಯಾಗಿದೆ.
ಗೋಣಿಚೀಲ, ಪ್ಲಾಸ್ಟಿಕ್ ವಸ್ತುಗಳ ಸಹಿತ ರಾಶಿ ಹಸಿಕಸ ಕೊಳೆತು ನಾರುತ್ತಿದೆ. ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಂಡೇ ಹೋಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಪಂ ಕಸವನ್ನು ತೆರವುಗೊಳಿಸುವುದರ ಜತೆಗೆ ಕಸ ಎಸೆದು ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
21/01/2022 04:59 pm