ಉಡುಪಿ: ಉಡುಪಿ ನಗರಸಭೆಯ ಸಾಮಾನ್ಯ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಭಾಗವಹಿಸಿದ ಶಾಸಕ ಕೆ. ರಘುಪತಿ ಭಟ್ ವಿವಿಧ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಕೃಷಿ ವಲಯದಲ್ಲಿ 10 ಸೆಂಟ್ಸ್ ತನಕ ಮನೆ ಕಟ್ಟಿಕೊಳ್ಳಲು ಅನುಮತಿ ಇರಲಿಲ್ಲ. ಸರಕಾರಕ್ಕೆ ಒತ್ತಡ ತಂದು ಇದೀಗ ಅಧಿಕಾರಿಗಳು ಈ ನಿಯಮಕ್ಕೆ ಒಪ್ಪಿದ್ದಾರೆ.ಕೃಷಿ ವಲಯದಿಂದ ವಸತಿ ವಲಯಕ್ಕೆ ಕನ್ವರ್ಷನ್ ಅಗತ್ಯವಿಲ್ಲ. 10 ಸೆಂಟ್ಸ್ ತನಕ ಮನೆ ಕಟ್ಟಿಕೊಳ್ಳಲು ಅವಕಾಶ ಸಿಗಲಿದೆ. ಈ ಬಗ್ಗೆ ರಾಜ್ಯ ಸರಕಾರ ಸದ್ಯದಲ್ಲೇ ನೋಟಿಫಿಕೇಶನ್ ಜಾರಿ ಮಾಡಲಿದೆ ಎಂದರು.
ಇನ್ನು ನಗರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ಮನೆ ಕಟ್ಟಿಕೊಂಡವರು ಈಗ ಮೊದಲ ಅಂತಸ್ತು ಕಟ್ಟಿಕೊಳ್ಳುವವರಿಗೆ ಈಗಿನ ನಗರಾಭಿವೃದ್ಧಿ ಪ್ರಾಧಿಕಾರದ ಕಾನೂನು ಸಮಸ್ಯೆಯಾಗುತ್ತಿದೆ. ಇದಕ್ಕೆ ಸಹ ಇತ್ತೀಚಿಗೆ ನಡೆದ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.
ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷ ನಾಯಕ ರಮೇಶ್ ಕಾಂಚನ್, ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ನಡೀತಾ ಇದ್ದು ಡಾಮರೀಕರಣ ಕಳಪೆಯಾಗಿದೆ. ಮಣಿಪಾಲದಲ್ಲಿ ನಗರಸಭೆಯ ನೀರು ಬಳಸಿ ಖಾಸಗಿ ವಾಹನ ತೊಳೆಯುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಜಾಗೃತರಾಗಬೇಕು ಎಂದರು. ಇತ್ತೀಚೆಗೆ ನಿಧನರಾದ ನಗರಸಭೆ ಅಧಿಕಾರಿ ವೆಂಕಟರಮಣಯ್ಯ, ನಾಮನಿರ್ದೇಶಿತ ಸದಸ್ಯ ಜನಾರ್ದನ ಭಂಡಾರ್ಕರ್ ನಿಧನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
Kshetra Samachara
30/12/2021 05:14 pm