ಮಣಿಪಾಲ: ಪೆಟ್ರೋಲ್, ಡೀಸೇಲ್ ದರ ಹೆಚ್ಚಾಗಿದ್ದು , ಅಗತ್ಯ ವಸ್ತುಗಳ ಬೆಲೆಯೂ ದಿನನಿತ್ಯ ಹೆಚ್ಚಾಗುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ರಿಕ್ಷಾ ಓಡಿಸಿ ಜೀವನ ನಡೆಸುವುದೇ ಕಷ್ಟವಾಗಿದೆ.ಹೀಗಾಗಿ ರಿಕ್ಷಾ ದರವನ್ನು ಮರು ಪರಿಷ್ಕರಣೆ ಮಾಡಿ ಎಂದು ಆಟೋ ಚಾಲಕ ಮತ್ತು ಮಾಲಕರು ಡಿಸಿ ಮೊರೆ ಹೋಗಿದ್ದಾರೆ.ಜಿಲ್ಲೆಯಲ್ಲಿ ಸಾವಿರಾರು ರಿಕ್ಷಾಗಳು ಓಡಾಟ ನಡೆಸುತ್ತಿವೆ. ಆಟೋವನ್ನೇ ನಂಬಿಕೊಂಡು ಸಾವಿರಾರು ಕುಟುಂಬ ಇದ್ದು ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಜಾಸ್ತಿಯಾಗಿದೆ.
ಎರಡು ವರ್ಷಗಳ ಹಿಂದೆ ದರ ಪರಿಷ್ಕರಣೆ ಆಗಿದ್ದು ಕಿಲೋ ಮೀಟರ್ ಗೆ ೩೦ ಹಾಗೂ ರನ್ನಿಂಗ್ ದರ ೧೭ ರೂಪಾಯಿ ಇತ್ತು.ಈಗ ಕಿಲೋ ಮೀಟರ್ ಗೆ ೪೦ ರೂ ಹಾಗೂ ರನ್ನಿಂಗ್ ದರ ೨೦ರೂ ಮಾಡಬೇಕು.ಇಲ್ಲದಿದ್ದರೆ ನಮಗೆ ಬದುಕುವುದಕ್ಕೇ ಕಷ್ಡವಾಗುತ್ತದೆ ಎಂದು ಆಟೋ ಯೂನಿಯನ್ ಮುಖಂಡರು ಆಗ್ರಹಿಸಿದ್ದಾರೆ.
Kshetra Samachara
20/12/2021 08:17 pm