ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಣಿಪಾಲ ರೇಪ್ ಕೇಸ್ ತನಿಖೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಮಣಿಪಾಲ: ಮಣಿಪಾಲ ರೇಪ್ ಕೇಸ್ ನ ಸಮಗ್ರ ತನಿಖೆಗೆ ಆಗ್ರಹಿಸಿ ಇವತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು.ಮಣಿಪಾಲದ ಡಿಸಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿನಿಯರು ಭಾಗಿಯಾದರು.ಈ

ಅತ್ಯಾಚಾರ ಪ್ರಕರಣದಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಸಾಧ್ಯತೆ ಇದೆ. ಇದರ ಬಗ್ಗೆ ಇನ್ನಷ್ಟು ಸಮಗ್ರವಾಗಿ ತನಿಖೆ ನಡೆಸಬೇಕು .

ಕೇವಲ ಓರ್ವ ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ.ಉಳಿದವರ ಬಗ್ಗೆಯೂ ಸರಿಯಾಗಿ ತನಿಖೆ ನಡೆಸಬೇಕು.ಮಣಿಪಾಲದಲ್ಲಿರುವ ಮಾದಕವಸ್ತು ಜಾಲವನ್ನು ಬಯಲಿಗೆಳೆಯಬೇಕು .ತಡರಾತ್ರಿ ಕಾರ್ಯಾಚರಿಸುವ ನೈಟ್ ಕ್ಲಬ್ ಮತ್ತು ಪಬ್ ಗಳನ್ನು ಮುಚ್ಚಬೇಕು.ಪೊಲೀಸ್ ಇಲಾಖೆ ನಿಸ್ಪಕ್ಷಪಾತವಾಗಿ ಮಹಿಳೆಯರ ರಕ್ಷಣೆಗೆ ಒತ್ತು ನೀಡಲಿ ಎಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.ಕೊನೆಗೆ ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Edited By : Manjunath H D
Kshetra Samachara

Kshetra Samachara

29/10/2021 01:57 pm

Cinque Terre

10.18 K

Cinque Terre

0

ಸಂಬಂಧಿತ ಸುದ್ದಿ