ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನಿಂದ ಉಡುಪಿ ದಿಕ್ಕಿನ ಕೊಲ್ನಾಡು ಜಂಕ್ಷನ್ ಬಳಿಯ ಸುಸಜ್ಜಿತ ಬಸ್ ತಂಗುದಾಣ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು ಅವ್ಯವಸ್ಥೆಗಳ ಆಗರವಾಗಿದೆ.
ಬಸ್ ತಂಗುದಾಣದ ಸುತ್ತಲೂ ಗಿಡ ಬಳ್ಳಿ ಪೊದೆ ಆವರಿಸಿದ್ದು, ನಿಲ್ದಾಣದ ಎದುರು ಭಾಗದಲ್ಲಿ ಕೆಲವು ತಿಂಗಳಿನಿಂದ ಗ್ಯಾಸ್ ಪೈಪ್ ಲೈನ್ ಕಾಮಗಾರಿಯ ಪೈಪುಗಳು ಬಿದ್ದಿದ್ದು, ನಿಧಾನಗತಿ ಕಾಮಗಾರಿಯಿಂದ ಅಪಾಯಕಾರಿಯಾಗಿ ಪರಿಣಮಿಸಿದೆ.
ತಂಗುದಾಣದ ಎದುರು ಅಡ್ಡವಾಗಿ ಬೆಳಗ್ಗಿನಿಂದ ಸಂಜೆವರೆಗೆ ಜೆಸಿಬಿ ಯನ್ನು ಅನಧಿಕೃತವಾಗಿ ನಿಲುಗಡೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕೊಲ್ನಾಡು ಜಂಕ್ಷನ್ ಅಪಾಯಕಾರಿಯಾಗಿದ್ದು, ಹೆದ್ದಾರಿಯಲ್ಲಿ ತಡೆರಹಿತ ಬಸ್ಸುಗಳು ತಂಗುದಾಣದ ಎದುರು ನಿಲ್ಲಿಸದೆ ಜಂಕ್ಷನ್ ಬಳಿ ನಿಲ್ಲಿಸುತ್ತಿದ್ದು, ಅನೇಕ ಅಪಘಾತಗಳು ಈಗಾಗಲೇ ಸಂಭವಿಸಿದೆ.
ಹೆದ್ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆನೀರು ಹರಿಯುತ್ತಿದ್ದು, ತಂಗುದಾಣದ ಎದುರು ಭಾಗ ಕೆಸರುಮಯವಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತಂಗುದಾಣದ ಸುತ್ತಲಿನ ಪೊದೆ, ಗಿಡ, ಪೈಪು ಹಾಗೂ ಜೆಸಿಬಿ ನಿಲುಗಡೆ ತೆರವುಗೊಳಿಸಬೇಕು ಹಾಗೂ ವ್ಯವಸ್ಥಿತ ಚರಂಡಿ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
15/10/2021 05:24 pm