ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಫುಟ್ ಪಾತ್ ಗಳಲ್ಲಿ ಕೆಲವು ಫುಟ್ ಪಾತ್ ಗಳು ಅಪಾಯವನ್ನು ಆಹ್ವಾನಿಸುತ್ತಿದ್ದು, ಸ್ಥಳೀಯಾಡಳಿತದ ಚಿತ್ತ ಇತ್ತ ಹರಿಯಬೇಕಿದೆ.
ನಗರದ ಕೆಲವು ಪ್ರದೇಶಗಳಲ್ಲಿ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ವ್ಯವಸ್ಥಿತ ಫುಟ್ ಪಾತ್ ನಿರ್ಮಿಸಲಾಗಿದ್ದರೂ ಉರ್ವಾಸ್ಟೋರ್, ಚಿಲಿಂಬಿ, ಬೆಂದೂರುವೆಲ್, ಕಂಕನಾಡಿ, ಬಲ್ಮಠ, ಕೆ.ಎಸ್.ರಾವ್ ರೋಡ್, ಸ್ಟೇಟ್ ಬ್ಯಾಂಕ್ ಪರಿಸರದ ರೊಸಾರಿಯೋ, ಸೈಂಟ್ ಆನ್ಸ್ ಶಾಲೆ ಇತ್ಯಾದಿ ಸ್ಥಳಗಳಲ್ಲಿ ಫುಟ್ ಪಾತ್ ಅವ್ಯವಸ್ಥೆಯಿಂದ ಕೂಡಿದೆ. ಸ್ಲ್ಯಾಬ್ ಮುರಿದಿರುವುದು, ಗಿಡಗಂಟಿ ಚಾಚಿರುವುದು ಹಾಗೂ ಪೈಪ್ ಮತ್ತಿತರ ಕಾಮಗಾರಿ ಸಂಬಂಧಿತ ಸಾಮಗ್ರಿ ರಾಶಿಯಾಗಿ ಫುಟ್ ಪಾತ್ ಗಳಲ್ಲಿಯೇ ಬಿದ್ದಿರುವುದು ಸಂಚಾರಿಗಳಿಗೆ ನಿತ್ಯ ನೋಟ.
Kshetra Samachara
14/10/2021 04:36 pm