ಮೂಡುಬಿದಿರೆ: ಜೀವದಯಾಷ್ಟಮಿ ಪ್ರಯುಕ್ತ ಗುರು ಬಸದಿ ಲೆಪ್ಪದ ಬಸದಿ, ಸಾವಿರ ಕಂಬದ ಬಸದಿ, ಜೈನಮಠದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಮೂಡುಬಿದಿರೆಯ 18 ಬಸದಿಗಳ ದರ್ಶನ ಮಾಡಿದರು.
108 ದಿವ್ಯ ಸಾಗರ ಮುನಿಯವರು ಶ್ರಾವಕವರನ್ನು ಆಶೀರ್ವದಿಸಿದರು.ಧವಳಾತ್ರಯ ಟ್ರಸ್ಟ್ ನಿಂದ ಪ್ರಕಾಶಿಸಲ್ಪಟ್ಟ ಜೈನ ಧರ್ಮ ಸಾರ ಪುಸ್ತಕವನ್ನು ಭಟ್ಟಾರಕ ಸ್ವಾಮೀಜಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಸಕಲ ಜೀವ ರಾಶಿಗಳ ಬಗ್ಗೆ ದಯೆ ಅನುಕಂಪ ತೋರಿಸುವ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ. ದ್ರವ್ಯ,ಹಿಂಸೆ ಪಾಪವಾಗಿದ್ದು ಭಾವ ಹಿಂಸೆ ಜೀವಿಭವ ಚಕ್ರದಲ್ಲಿ ದುಃಖವನ್ನು ಪಡೆಯ ಬೇಕಾಗುತ್ತದೆ.ಸಕಾಲ ಜೀವಿಗಳು ದಯೆ ಅನುಕಂಪ ತೋರೋಣ ಎಂದು ನುಡಿದರು.
ದೆಹಲಿ ಎಲ್ .ಪಿ .ಜಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನುಜ್ ಜೈನ್, ಕರ್ನಾಟಕ ಹೈ ಕೋರ್ಟ್ ನ್ಯಾಯದೀಶ ಅರುಣ್ ಜೈನ್, ಮೂಡುಬಿದಿರೆ ನ್ಯಾಯಾಧೀಶಾದ ಲಕ್ಷೀ , ಮಹಾರಾಷ್ಟ್ರ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ರಾಜಸ್ಥಾನ್ ಯಾತ್ರಿಕರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಶ್ರಾವಕ ಶ್ರಾವಿಕೆ ಯರು 18 ಬಸದಿ ದರ್ಶನ ಮಾಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್ , ದಿನೇಶ್ ಕುಮಾರ್ , ಆದರ್ಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/10/2021 07:39 pm