ಗಂಗೊಳ್ಳಿ: ಅಕ್ಟೋಬರ್ 1ರಂದು ಗಂಗೊಳ್ಳಿಯಲ್ಲಿ ಗೋ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆದಿತ್ತು.ಈ ಪ್ರತಿಭಟನೆ ನಂತರ ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುವುದನ್ನು ಅನ್ಯಕೋಮಿನವರು ನಿಲ್ಲಿಸಿದ್ದಾರೆ ಎಂಬ ದಟ್ಟ ವದಂತಿ ಹರಡಿದ್ದು ,ಇದಕ್ಕೆ ಪುಷ್ಟಿ ನೀಡುವಂತೆ ವ್ಯಾಪಾರವಿಲ್ಲದ ಗಂಗೊಳ್ಳಿ ಮೀನುಮಾರುಕಟ್ಟೆ ಖಾಲಿ ಖಾಲಿಯಾಗಿವೆ!
ಇಷ್ಟೇ ಅಲ್ಲ ,ಮೀನು ಖರೀದಿಗೆ ಬರುವ ಅನ್ಯ ಕೋಮಿನವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಗೆ ಮಹಿಳೆಯರು ದೂರನ್ನೂ ನೀಡಿದ್ದಾರೆ.ಬಳಿಕ ಪೊಲೀಸರು ಊರಿನಲ್ಲಿ ಶಾಂತಿ ಸಭೆ ನಡೆಸಿದ್ದಾರೆ.
ಶಾಂತಿ ಸಭೆ ಬಳಿಕವೂ, ಮೀನು ಖರೀದಿಗೆ ಅನ್ಯಕೋಮಿನವರು ಮಾರುಕಟ್ಟೆಗೆ ಬಾರದೇ ಇರುವುದರಿಂದ ವ್ಯಾಪಾರ ಇಲ್ಲದೇ ಮೀನು ಮಾರಾಟ ಮಾಡುವ ಮಹಿಳೆಯರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.ಇದರಿಂದಾಗಿ ಇಲ್ಲಿನ ಮೀನು ಮಾರುಕಟ್ಟೆ ಬಿಕೋ ಎನ್ನುತ್ತಿದೆ!
Kshetra Samachara
06/10/2021 04:49 pm