ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66 ರ ಕುಳಾಯಿ ಹೊನ್ನಕಟ್ಟೆಯಿಂದ ಎಂಆರ್ಪಿಎಲ್ ಗೆ ಹೋಗುವಾಗ ಕುಳಾಯಿ ಗುಡ್ಡೆ ಯ ಬಳಿ ಬರುವ ಕೊಂಕಣ ರೈಲ್ವೆ ಮೇಲ್ಸೇತುವೆ ರಸ್ತೆ ಅವ್ಯವಸ್ಥೆಗಳ ಆಗರವಾಗಿದೆ
ಸೇತುವೆಯ ಮೇಲ್ಗಡೆ ರಸ್ತೆ ಹೊಂಡಮಯ ವಾಗಿದ್ದು ಸಂಚರಿಸಲು ಅನಾನುಕೂಲವಾಗಿದೆ. ರಸ್ತೆಯ ಅವಸ್ಥೆ ಯನ್ನು ನೋಡಿದರೆ ಸಮೀಪದಲ್ಲಿರುವ ಕೊಂಕಣ ರೈಲ್ವೆ ಮೇಲ್ಸೇತುವೆ ಕುಸಿದು ಬೀಳುವ ಲಕ್ಷಣಗಳು ಗೋಚರಿಸುತ್ತಿದೆ.
ರಸ್ತೆ ಅವ್ಯವಸ್ಥೆ ಯಿಂದ ದ್ವಿಚಕ್ರ ವಾಹನಗಳಿಗೆ ಈ ದಾರಿಯಲ್ಲಿ ಹೋಗಲು ಅಸಾಧ್ಯ ಮತ್ತು ಭಯವಾಗುತ್ತಿದೆ ಅದರಲ್ಲೂ ಮಹಿಳೆಯರು ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗುವವರು ತಮ್ಮ ವಾಹನಗಳಲ್ಲಿ ತುಂಬಾ ಹರಸಾಹಸ ಮಾಡಿ ಸಂಚರಿಸುವಂತಾಗಿದೆ.
ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಪರಿಶೀಲಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ
Kshetra Samachara
06/10/2021 04:03 pm