ಮಂಗಳೂರು: ಓಮನ್ ಕಡೆ ತೆರಳಿರುವ ಶಾಹೀನ್ ಚಂಡಮಾರುತದ ಅಬ್ಬರಕ್ಕೆ ಈಗಾಗಲೇ 3ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಚಂಡಮಾರುತದ ಪ್ರಯುಕ್ತ ಓಮನ್ನಲ್ಲಿ ಭಾರೀ ಮಳೆಯಾಗುತ್ತಿದ್ದು, ಕರಾವಳಿ ತೀರದಲ್ಲಿ ಬಿರುಗಾಳಿ ಬೀಸಲಾರಂಭಿಸಿದೆ. ಇದರಿಂದ ಮಸ್ಕತ್ನಿಂದ ತೆರಳುತ್ತಿದ್ದ ವಿಮಾನಗಳ ಸಂಚಾರ ಸ್ಥಗಿತವಾಗಿದೆ. ಇರಾನ್ನಲ್ಲೂ ಶಾಹೀನ್ ಚಂಡಮಾರುತದ ಅಬ್ಬರ ಜೋರಾಗಿದ್ದು, 6ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಸ್ಕತ್‌ಗೆ ಭಾನುವಾರ ಬೆಳಗ್ಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಶಾಹೀನ್ ಚಂಡಮಾರುತದ ಕಾರಣ ಇಡೀ ದಿನ ಹಾರಲಾಗದೆ ಕೊನೆಗೆ ರದ್ದಾಗಿದೆ. ಇದರಿಂದಾಗಿ ಪ್ರಯಾಣಿಕರು ಪೇಚಿಗೆ ಸಿಲುಕಿದರು. ವಿಮಾನದಲ್ಲಿ ತೆರಳಬೇಕಾದ 100ಕ್ಕೂ ಅಧಿಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲಕಳೆಯುವಂತಾಯಿತು. ಸಂಜೆ ವೇಳೆಗಷ್ಟೇ ವಿಮಾನ ರದ್ದಾಗಿದೆ, ಅಕ್ಟೋಬರ್ 7ರಂದು ವಿಮಾನ ತೆರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಸಂಜೆಯ ನಂತರವಷ್ಟೇ ಪ್ರಯಾಣಿಕರು ತಮ್ಮ ಊರಿಗೇ ಮರಳುವಂತಾಯಿತು.
Kshetra Samachara
04/10/2021 12:03 pm