ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರಯಾಣಿಕರ ಗಮನಕ್ಕೆ; ಕೆಲವು ರೈಲು ವೇಳಾಪಟ್ಟಿ ಪರಿಷ್ಕರಣೆ

ಮಂಗಳೂರು: ಮಂಗಳೂರು ಜಂಕ್ಷನ್‌ ಮತ್ತು ಮಂಗಳೂರು ಸೆಂಟ್ರಲ್‌ ಗೆ ಬರುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನ ವೇಳಾಪಟ್ಟಿ ಪರಿಷ್ಕರಿಸಲಾಗಿದೆ.

* ಮಂಗಳೂರು ಜಂಕ್ಷನ್ :‌ ನಂ. 06539 ಯಶವಂತಪುರ- ಮಂಗಳೂರು ಜಂಕ್ಷನ್‌ ಸಾಪ್ತಾಹಿಕ (ಶನಿವಾರ) ರೈಲು ಸಂಜೆ 5ರ ಬದಲು 4.40ಕ್ಕೆ ಬರಲಿದ್ದು, ಇದು ಅ.2ರಿಂದ ಅನ್ವಯವಾಗಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸುವ ನಂ.06575 ಯಶವಂತಪುರ- ಮಂಗಳೂರು ಜಂಕ್ಷನ್‌ ರೈಲು ಸಂಜೆ 5ರ ಬದಲಾಗಿ 6.40ಕ್ಕೆ ಆಗಮಿಸಲಿದೆ. ಈ ಟೈಮಿಂಗ್ ಅ.3ರಿಂದ ಜಾರಿಗೆ ಬರಲಿದೆ.

ನಂ.06211 ಯಶವಂತಪುರ- ಕಾರವಾರ (ಸೋಮವಾರ, ಬುಧವಾರ, ಶುಕ್ರವಾರ) ಸಂಜೆ 4.40ಕ್ಕೆ ಆಗಮಿಸಿ‌, 5 ಗಂಟೆಗೆ ನಿರ್ಗಮಿಸಲಿದ್ದು, ಅ.1ರಿಂದ ಅನ್ವಯವಾಗುವುದು. ನಂ. 06515 ಬೆಂಗಳೂರು- ಕಣ್ಣೂರು ರೈಲು ಬೆಳಗ್ಗೆ 7.28ಕ್ಕೆ ಬಂದು, 7.30ಕ್ಕೆ ಹೊರಡಲಿದ್ದು, ಅ.1ರಿಂದ ಜಾರಿಗೆ ಬರಲಿದೆ. ನಂ. 06516 ಕಣ್ಣೂರು- ಬೆಂಗಳೂರು ರೈಲು ರಾತ್ರಿ 8.25ಕ್ಕೆ ಆಗಮಿಸಿ, 8.27ಕ್ಕೆ ನಿರ್ಗಮಿಸಲಿದ್ದು, ಅ.1ರಿಂದ ಜಾರಿಗೆ ಬರುವುದು.

* ಮಂಗಳೂರು ಸೆಂಟ್ರಲ್:‌ ಮಂಗಳವಾರ, ಗುರುವಾರ, ಭಾನುವಾರ ಸಂಚರಿಸುವ ನಂ.06531 ಬೆಂಗಳೂರು- ಮಂಗಳೂರು ಸೆಂಟ್ರಲ್‌ ರೈಲು ಬೆಳಗ್ಗೆ 9.05ಕ್ಕೆ ಬರಲಿದೆ. ನಂ. 06347 ತಿರುವನಂತಪುರ- ಮಂಗಳೂರು ಸೆಂಟ್ರಲ್‌ ರೈಲು 11.30ಕ್ಕೆ, ನಂ.06323 ಕೊಯಮತ್ತೂರು-ಮಂಗಳೂರು ಸೆಂಟ್ರಲ್‌ ರೈಲು ಸಂಜೆ 6.40ಕ್ಕೆ ಮತ್ತು ನಂ.06516 ಕಣ್ಣೂರು-ಬೆಂಗಳೂರು ರೈಲು ರಾತ್ರಿ 7.50ಕ್ಕೆ ಬಂದು 8.10ಕ್ಕೆ ಹೊರಡಲಿದೆ. ಈ ಹೊಸ ವೇಳಾಪಟ್ಟಿ ಅ.1ರಿಂದ ಅನ್ವಯವಾಗಲಿದೆ.

Edited By : Nirmala Aralikatti
Kshetra Samachara

Kshetra Samachara

30/09/2021 11:40 am

Cinque Terre

11.43 K

Cinque Terre

0

ಸಂಬಂಧಿತ ಸುದ್ದಿ