ಮುಲ್ಕಿ: ಕಿನ್ನಿಗೋಳಿ ಹಳೆಯಂಗಡಿ ಪ್ರಧಾನ ಲೋಕೋಪಯೋಗಿ ರಸ್ತೆಯ ಪಕ್ಷಿಕೆರೆ ಕಾನ್ವೆಂಟ್ ಬಳಿ ರಸ್ತೆ ಹೊಂಡ ಮಯವಾಗಿ ಅವ್ಯವಸ್ಥೆಯ ಆಗರವಾಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ದಿನವೊಂದಕ್ಕೆ ಸಾವಿರಾರು ವಾಹನಗಳು ಓಡಾಡುವ ಪಕ್ಷಿಕೆರೆ ಕಾನ್ವೆಂಟ್ ಬಳಿಯ ರಸ್ತೆ ಕಳೆದ ಹಲವಾರು ವರ್ಷಗಳಿಂದ ಹೊಂಡ ಗುಂಡಿ ಸಮಸ್ಯೆ ಎದುರಿಸುತ್ತಿದ್ದು ಆಗಾಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಕಾಟಾಚಾರಕ್ಕೆ ಸರಿ ಪಡಿಸುತ್ತಿದ್ದಾರೆ. ಆದರೆ ಪ್ರತಿ ಮಳೆಗಾಲದಲ್ಲಿ ರಸ್ತೆ ಹೊಂಡಮಯ ವಾಗುತ್ತಿದ್ದು ಶಾಶ್ವತ ದುರಸ್ತಿ ಅಗತ್ಯವಿದೆ ಎಂದು ಸ್ಥಳೀಯರು ಪ್ರತಿಪಾದಿಸಿದ್ದಾರೆ
ಮಳೆಗಾಲದಲ್ಲಿ ಪರಿಸರದಲ್ಲಿ ಅಸಂಬದ್ಧ ಕಾಮಗಾರಿಯಿಂದ ಕೃತಕ ನೆರೆ ಉಂಟಾಗಿ ಕಿರು ಮೋರಿ ಬಳಿ ಭಾರಿ ಗಾತ್ರದ ಹೊಂಡಗಳು ಉಂಟಾಗಿ ಅನೇಕ ಅಪಘಾತಗಳು ಸಂಭವಿಸಿದೆ ಎಂದು ಹೇಳಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಹರಿಪಾದೆ "ಈ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸರಿಯಾದ ಕಾಮಗಾರಿ ನಡೆಸಲು ಆಗದಿದ್ದರೆ ನಮ್ಮ ಸಂಘಟನೆಯವರು ಮಾಡುತ್ತಾರೆ "ಎಂದು ಇಲಾಖೆಯ ಅಧಿಕಾರಿಗಳಿಗೆ ಟಾಂಗ್ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ನಿತಿನ್ ವಾಸ್ ಮಾತನಾಡಿ ಪಕ್ಷಿಕೆರೆ ಹಳೆಯಂಗಡಿ ಪ್ರಧಾನ ರಸ್ತೆ ಕೊಯಿಕುಡೆ ಪೆಟ್ರೋಲ್ ಬಂಕ್ ಬಳಿ, ಕಾನ್ವೆಂಟ್ ಬಳಿ ರಸ್ತೆ ಅವ್ಯವಸ್ಥೆ ಯಾಗಿದ್ದು ಕೂಡಲೇ ದುರಸ್ತಿ ಪಡಿಸುವಂತೆ ಲೋಕೋಪಯೋಗಿ ಇಲಾಖೆಯನ್ನು ಒತ್ತಾಯಿ ಸಿದ್ದಾರೆ.
Kshetra Samachara
26/09/2021 02:38 pm