ಉಡುಪಿ: ಎರ್ನಾಕುಳಂ- ಪುಣೆ ವಿಶೇಷ ರೈಲು ಸಂಚಾರ ಆರಂಭಗೊಂಡಿದೆ. ನಂ. 01197 ಪುಣೆ-ಎರ್ನಾಕುಳಂ ಸಾಪ್ತಾಹಿಕ ಎಕ್ಸ್ ಪ್ರೆಸ್ (ಪೂರ್ಣ ಕಾದಿರಿಸಿದ) ರೈಲು ರಾತ್ರಿ 10.10ಕ್ಕೆ ಪುಣೆಯಿಂದ ಹೊರಟು ಮೂರು ದಿನಗಳ ಬಳಿಕ ಎರ್ನಾಕುಳಂಗೆ ಅಪರಾಹ್ನ ತಲುಪಲಿದೆ. ಈ ಸಂಚಾರ ಸೆ.25ರಿಂದ ಪ್ರತಿ ಶನಿವಾರ ಇರಲಿದೆ.
ನಂ.01198 ಎರ್ನಾಕುಳಂ-ಪುಣೆ ಸಾಪ್ತಾಹಿಕ ಸೂಪರ್ ಫಾಸ್ಟ್(ಕಾದಿರಿಸಿದ) ರೈಲು ರಾತ್ರಿ 8.50ಕ್ಕೆ ಎರ್ನಾಕುಳಂನಿಂದ ಹೊರಟು ಮರುದಿನ ರಾತ್ರಿ 11.35ಕ್ಕೆ ಪುಣೆ ತಲುಪಲಿದೆ. ಈ ರೈಲು ಸೆ.27ರಿಂದ ಪ್ರತಿ ಸೋಮವಾರ ಸಂಚಾರ ನಡೆಸಲಿದೆ. ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು, ಕಾಸರಗೋಡು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
* ವಾರದಲ್ಲಿ 2 ಬಾರಿ ಸಂಚಾರ: ಪುಣೆ-ಎರ್ನಾಕುಳಂ(ಪೂರ್ತಿ ಕಾದಿರಿಸಿದ) ವಾರದಲ್ಲಿ ಒಂದು ದಿನ ಓಡಾಡುತ್ತಿದ್ದ 01150/ 01149 ಸಂಖ್ಯೆಯ ರೈಲು ವಾರದಲ್ಲಿ 2 ದಿನ ಸಂಚರಿಸಲಿದೆ. 01150 ಸಂಖ್ಯೆಯ ಪುಣೆ-ಎರ್ನಾಕುಳಂ ಸೂಪರ್ ಫಾಸ್ಟ್ ರೈಲು ಪ್ರತಿ ಭಾನುವಾರ, ಬುಧವಾರ ಸೆ.29ರಿಂದ ಸಂಚಾರ ನಡೆಸಲಿದೆ. ರೈಲು ಸಂಖ್ಯೆ 01149 ಎರ್ನಾಕುಳಂ- ಪುಣೆ ಸೂಪರ್ ಫಾಸ್ಟ್ ರೈಲು ಮಂಗಳವಾರ, ಶುಕ್ರವಾರ ಅ.1ರಿಂದ ಸಂಚರಿಸಲಿದೆ.
* ಹೊಸ ಕೋಚ್ ಸೇರ್ಪಡೆ: ಜಬಲ್ಪುರ- ಕೊಯಮತ್ತೂರು- ಜಬಲ್ಪುರ 02198/02197 ಸಂಖ್ಯೆಯ ರೈಲು ಸಾಪ್ತಾಹಿಕ ಸೂಪರ್ ಫಾಸ್ಟ್ ಹಬ್ಬ ವಿಶೇಷವಾಗಿ 2 ಸ್ಲೀಪರ್ ಕೋಚ್ ಹೆಚ್ಚಿಸಲಾಗಿದೆ. ಇನ್ನು24 ಬೋಗಿಗಳ ರೈಲು ಸಂಚರಿಸಲಿದೆ. ಜಬಲ್ಪುರ- ಕೊಯಮತ್ತೂರು ರೈಲು(02198) ಸೆ.24ರಿಂದ, ಕೊಯಮತ್ತೂರು- ಜಬಲ್ಪುರ ರೈಲು(02197) ಸೆ.27ರಿಂದ ಸಂಚರಿಸಲಿದೆ.
Kshetra Samachara
24/09/2021 11:46 am