ಬಜಪೆ: ಎಕ್ಕಾರಿನಿಂದ ಶಿಬರೂರಿಗೆ ಸಾಗುವಂತಹ ರಸ್ತೆಯ ಅಂಚುಗಳ ಉದ್ದಕ್ಕೂ ಕಸದ ರಾಶಿಯು ತುಂಬಿಹೋಗಿದ್ದು,ದುರ್ನಾತ ಬಿರುತ್ತಿದೆ.
ಎಕ್ಕಾರಿನಿಂದ ಕಾಟಿಪಲ್ಲ,ಕೃಷ್ಣಾಪುರ ಹಾಗೂ ಸುರತ್ಕಲ್ ಕಡೆಗಳಿಗೆ ಸಂಪರ್ಕ ಕಲ್ಪಸುವಂತಹ ತೀರಾ ಹತ್ತಿರದ ರಸ್ತೆಯಾಗಿದೆ.
ಈ ರಸ್ತೆಯು ಕಳೆದ ಕೆಲ ತಿಂಗಳುಗಳ ಹಿಂದೆಯಷ್ಟೆ ಆಗಲೀಕರಣಗೊಂಡಿತ್ತು.ಈ ಸಂದರ್ಭದಲ್ಲಿ ರಸ್ತೆಯ ಎರಡು ಅಂಚುಗಳಲ್ಲಿ ಚರಂಡಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಹಿಂದೆ ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿ ತೀರಾ ಹದಗೆಟ್ಟ ಸ್ಥಿತಿಯಲ್ಲಿತ್ತು.
ಇದೀಗ ಆಗಲೀಕರಣ ಗೊಂಡಿದ್ದು,ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ರಸ್ತೆಯ ಅಂಚುಗಳ ಲ್ಲಿ ಕಸಗಳ ರಾಶಿಯು ಹೆಚ್ಚಾಗುತ್ತಲೇ ಇದ್ದು, ವಾಹನಗಳಲ್ಲಿ ಬೇರೆ ಕಡೆಯಿಂದ ಬರುವಂತಹ ಸವಾರರು ಕಸಗಳನ್ನು ತಂದು ರಸ್ತೆಯ ಅಂಚಿಗೆ ಎಸೆದು ಹೋಗುದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದುರ್ನಾತ ಬಿರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಸದ ರಾಶಿಯಲ್ಲಿ ಕೆಲ ಬಾಟಲ್ ಗಳು ಕೂಡಾ ಇದ್ದುದು ಕಂಡುಬಂದಿದೆ.
ಸದ್ಯ ರಸ್ತೆಯ ಅಂಚಿನಲ್ಲಿ ಕಸ ಎಸೆದು ಹೋಗುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
08/09/2021 07:16 pm