ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ರಾಜ್ಯ ಹೆದ್ದಾರಿ ಪದ್ಮನೂರು ಬಳಿ ಕಿತ್ತು ಹೋದ ಕಾಂಕ್ರೀಟ್ ಸ್ಲಾಬ್ ತಾತ್ಕಾಲಿಕ ದುರಸ್ತಿ ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಮುಲ್ಕಿ: ಕಿನ್ನಿಗೋಳಿ ಮುಲ್ಕಿಯ ರಾಜ್ಯ ಹೆದ್ದಾರಿ ಪದ್ಮನೂರು ಅಪಾಯಕಾರಿ ತಿರುವಿನಲ್ಲಿ ಭಾರಿ ಗಾತ್ರದ ಹೊಂಡಕ್ಕೆ ಹಾಕಿದ ಕಾಂಕ್ರೀಟ್ ಸ್ಲಾಬ್ ಕಿತ್ತುಹೋಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ ಕಳೆದ ವರ್ಷದ ಮಳೆಗಾಲದಲ್ಲಿ ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಕೆಲ ಲಾರಿ ಮಾಲೀಕರು ಹೊಂಡಗಳಿಗೆ ಸಿಮೆಂಟಿನ ಕಾಂಕ್ರೀಟ್ ಸ್ಲಾಬ್ ಹಾಕಿ ತಾತ್ಕಾಲಿಕ ದುರಸ್ತಿ ಪಡಿಸಿದ್ದರು.

ಆದರೆ ಈ ಬಾರಿ ಸುರಿದ ಭಾರಿ ಮಳೆಗೆ ಪದ್ಮನೂರು ಬಳಿಯ ರಾಜ್ಯ ಹೆದ್ದಾರಿ ಅಪಾಯಕಾರಿ ತಿರುವಿನಲ್ಲಿ ಹಾಕಿದ್ದ ಸಿಮೆಂಟಿನ ಕಾಂಕ್ರೀಟ್ ಸ್ಲಾಬ್ ಕಿತ್ತು ಹೋಗಿದ್ದು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಪಬ್ಲಿಕ್ ನೆಕ್ಸ್ಟ್ ಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಗೋಪಾಲ್ ನೇತೃತ್ವದಲ್ಲಿ ತಾತ್ಕಾಲಿಕ ದುರಸ್ತಿ ನಡೆದಿದೆ.

ಕಿನ್ನಿಗೋಳಿ ಮೂಡಬಿದ್ರೆ ಕಟೀಲು ಮುಲ್ಕಿ ರಾಜ್ಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿದ್ದ ಚರಂಡಿ ವ್ಯವಸ್ಥೆ ಇಲ್ಲದೆ ಡಾಮರೀಕರಣ ನಾಶವಾಗುತ್ತಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಚರಂಡಿ ದುರಸ್ತಿ ಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

03/09/2021 03:09 pm

Cinque Terre

19.91 K

Cinque Terre

3

ಸಂಬಂಧಿತ ಸುದ್ದಿ