ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಘನ ವಾಹನಗಳಿಗೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಗುಂಡ್ಯ ವಾಹನ ತಪಾಸಣಾ ಕೇಂದ್ರದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಚಾಲಕರು, ಕ್ಲೀನರ್ ಗಳು ಚೆಕ್ ಪೋಸ್ಟ್ ನಲ್ಲೇ ಬಾಕಿಯಾಗಿದ್ದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಗುಂಡ್ಯ ವಾಹನ ತಪಾಸಣೆ ಕೇಂದ್ರದಲ್ಲಿ ಸುಮಾರು 80ಕ್ಕೂ ಅಧಕ ಘನ ವಾಹನಗಳು ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಬಾಕಿಯಾಗಿದ್ದು, ಸ್ಥಳದಲ್ಲಿ ಸುಮಾರು 150ಕ್ಕೂ ವಾಹನ ಚಾಲಕರು ಬಾಕಿಯಾಗಿದ್ದು, ಸ್ಥಳದಲ್ಲಿ ಸ್ವಲ್ಪ ಮಟ್ಟಿಗೆ ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು.
ಸ್ಥಳಕ್ಕೆ ಕಡಬ ತಹಶಿಲ್ದಾರ್, ಉಪ್ಪಿನಂಗಡಿ ಪೊಲೀಸರ ಭೇಟಿ ನೀಡಿ ಚಾಲಕರ ಮನವೊಲಿಸುವ ಪ್ರಯತ್ನ ಮಾಡಿದ್ದು, ಚಾಲಕರು ತಮಗೆ ಕೂಡಲೇ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪೂರಕವಾಗಿ ಸ್ಪಂದಿಸಿದ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಘಟನೆಯ ಬಗ್ಗೆ ತಿಳಿಸಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿದರು.
Kshetra Samachara
20/08/2021 01:24 pm