ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅದಾನಿ ಪೈಪ್ ಲೈನ್ ಕಾಮಗಾರಿಯಿಂದ ಅವ್ಯವಸ್ಥೆ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಬಸ್ಸುನಿಲ್ದಾಣದ ಬಳಿ ಕಳೆದ ಒಂದು ತಿಂಗಳಿನಿಂದ ಅದಾನಿ ಗ್ಯಾಸ್ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು ಅವ್ಯವಸ್ಥೆಗಳ ಆಗರವಾಗಿದೆ.

ಪೈಪ್ ಲೈನ್ ಕಾಮಗಾರಿಯಿಂದ ಬಸ್ ನಿಲ್ದಾಣ ಕೆಸರುಮಯ ವಾಗಿದ್ದು ಬಸ್ಸಿನ ನಿಲುಗಡೆ ಹಾಗೂ ಪ್ರಯಾಣಿಕರಿಗೆ ನಡೆದಾಡಲು ತೀವ್ರ ತೊಂದರೆಯಾಗಿದೆ.

ಪೈಪ್ಲೈನ್ ಕಾಮಗಾರಿಯಿಂದ ನಿಲ್ದಾಣದ ಬಳಿಯಲ್ಲಿ ಕೆಸರು ಮಣ್ಣಿನ ರಾಶಿ ಇದ್ದು ಅಲ್ಲಲ್ಲಿ ತೆರೆದ ಹೊಂಡಗಳು ಅಪಾಯಕಾರಿಯಾಗಿದ್ದು ಇನ್ನೂ ತೆರವುಗೊಳಿಸಿಲ್ಲ.

ಕಳೆದ ಕೆಲ ದಿನಗಳ ಹಿಂದೆ ಪೈಪ್ಲೈನ್ ಕಾಮಗಾರಿಯಿಂದ ಹಾನಿಗೀಡಾದ ಕಟ್ಟಡದ ಎದುರು ಭಾಗದ ಸ್ಥಳವನ್ನು ದುರಸ್ತಿ ಮಾಡುತ್ತಿದ್ದಾರೆ.

ಆದರೆ ಮುಲ್ಕಿಯ ಕೇಂದ್ರ ಬಸ್ ನಿಲ್ದಾಣ ಮಾತ್ರ ಅವೈಜ್ಞಾನಿಕ ಪೈಪ್ಲೈನ್ ಕಾಮಗಾರಿಯಿಂದ ನಡೆದಾಡಲು, ಸಂಚರಿಸಲು ದುಸ್ತರವಾಗಿದೆ.

ಕೂಡಲೇ ಕಾಮಗಾರಿ ಮುಗಿಸಿ ಬಸ್ಸು ನಿಲ್ದಾಣದ ಸ್ವಚ್ಛತೆಗೆ ಮಹತ್ವ ನೀಡಬೇಕೆಂದು ಬಸ್ಸು ಚಾಲಕ ಇಕ್ಬಾಲ್ ಸಂಬಂಧಪಟ್ಟ ಆಡಳಿತವನ್ನು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

19/08/2021 05:34 pm

Cinque Terre

5.7 K

Cinque Terre

0

ಸಂಬಂಧಿತ ಸುದ್ದಿ