ಉಡುಪಿ : ಆ.16ರಿಂದ ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ದೈನಂದಿನ ವಿಶೇಷ ರೈಲು ಓಡಾಟ ಆರಂಭಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ನಂ.06602 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ದೈನಂದಿನ ವಿಶೇಷ ರೈಲು ಆ.16ರಿಂದ ಪ್ರತಿದಿನ ಮುಂಜಾನೆ 5:30ಕ್ಕೆ ಮಂಗಳೂರು ಸೆಂಟ್ರಲ್ ನಿಂದ ನಿರ್ಗಮಿಸಲಿದ್ದು, ಅದೇ ದಿನ ಅಪರಾಹ್ನ 2 ಗಂಟೆಗೆ ಮಡಗಾಂವ್ ಜಂಕ್ಷನ್ ತಲುಪಲಿದೆ.
ರೈಲು ನಂ.06601 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ದೈನಂದಿನ ವಿಶೇಷ ರೈಲು ಆ.16ರಿಂದ ಪ್ರತಿದಿನ ಅಪರಾಹ್ನ 2:30ಕ್ಕೆ ಮಡಗಾಂವ್ ಜಂಕ್ಷನ್ ನಿಂದ ನಿರ್ಗಮಿಸಲಿದ್ದು, ಅದೇ ದಿನ ರಾತ್ರಿ 9:40ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಈ ರೈಲಿಗೆ ಮಂಗಳೂರು ಜಂಕ್ಷನ್, ತೋಕೂರು, ಸುರತ್ಕಲ್, ಮೂಲ್ಕಿ, ನಂದಿಕೂರು, ಪಡುಬಿದ್ರಿ, ಇನ್ನಂಜೆ, ಉಡುಪಿ, ಬಾರಕೂರು, ಕುಂದಾಪುರ, ಸೇನಾಪುರ, ಬೀಜೂರು, ಮುಕಾಂಬಿಕಾ ರೋಡ್ ಬೈಂದೂರು, ಶಿರೂರು, ಭಟ್ಕಳ, ಚಿತ್ರಾಪುರ, ಮುರ್ಡೇಶ್ವರ, ಮಂಕಿ, ಹೊನ್ನಾವರ, ಕುಮಟಾ, ಮಿರ್ಜಾನ, ಗೋಕರ್ಣ ರೋಡ್, ಅಂಕೋಲ, ಹಾರವಾಡ, ಕಾರವಾರ, ಅಸ್ಗೋಟಿ, ಲೋಯಿಮ್, ಕ್ಯಾನ್ಕೋನಾ ಹಾಗೂ ಬಲ್ಲಿ ಸ್ಟೇಶನ್ಗಳಲ್ಲಿ ನಿಲುಗಡೆ ಇರುತ್ತದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕೊಂಕಣ ರೈಲ್ವೆ ಪ್ರಕಟಣೆ ಹೇಳಿದೆ.
Kshetra Samachara
11/08/2021 10:41 pm