ಮಂಗಳೂರು: ನಗರದ ಬೋಳೂರಿನಲ್ಲಿರುವ ಸುಲ್ತಾನ್ ಬತ್ತೇರಿ ಪರಿಸರವನ್ನು ಬೋಳೂರು ಮೊಗವೀರ ಮಹಾಸಭಾ ವತಿಯಿಂದ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿಂದ ಪ್ಯಾಸೆಂಜರ್ ಬೋಟ್ ಮೂಲಕ ಫಲ್ಗುಣಿ ನದಿ ದಾಟಿದರೆ ತಣ್ಣೀರುಬಾವಿ ಬೀಚ್ ಕಾಣಬಹುದು.
ಬೋಳೂರು ದೊಡ್ಡಮನೆ ದಿ. ಕಾವೇರಿ ಮೆಂಡನ್ ಸ್ಮರಣಾರ್ಥ ಕೊಡುಗೆಯ ಉಚಿತ ಫಿಟ್ನೆಸ್ ಸೆಂಟರ್, ಬೋಳೂರು ಮೊಗವೀರ ಮಹಾಸಭಾ ನಿರ್ಮಿಸಿದ ವಿಶ್ರಾಂತಿ ಪಾರ್ಕ್ ಹಾಗೂ ಪ್ಯಾಸೆಂಜರ್ ಬೋಟನ್ನು ಶಾಸಕ ವೇದವ್ಯಾಸ ಕಾಮತ್ ಆಗಸ್ಟ್ 9 ರಂದು ಉದ್ಘಾಟಿಸಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ಮೊಗವೀರ ಸಮಾಜ ಮುಂದಾಳು ಜಯ ಸಿ.ಕೋಟ್ಯಾನ್, ಭೂಷಣ್ ಮೆಂಡನ್, ದಾನಿ ಸರಳಾ ಬಿ.ಕಾಂಚನ್, ಮೊಗವೀರ ಮಹಾಸಭಾ ಅಧ್ಯಕ್ಷ ರಾಜಶೇಖರ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಸ್ವಚ್ಛ, ಸುಂದರ ಈ ಪ್ರವಾಸಿ ತಾಣದಲ್ಲಿ ಕಂಬಳ, ಮತ್ಸ್ಯ ಬಲೆ ಮತ್ತಿತರ ಚಿತ್ರಕಲೆ ಗಮನ ಸೆಳೆಯುತ್ತದೆ. ದೈಹಿಕ ಆರೋಗ್ಯ ರಕ್ಷಣೆಗೆ ವಾಕಿಂಗ್ ಟ್ರ್ಯಾಕ್ ಸಹಿತ ನಾನಾ ಬಗೆಯ ವ್ಯಾಯಾಮ ಸಾಧನಗಳನ್ನು ಅಳವಡಿಸಲಾಗಿದೆ.
Kshetra Samachara
10/08/2021 04:33 pm