ಪಬ್ಲಿಕ್ ನೆಕ್ಸ್ಟ್ ವರದಿ ಫಲಶೃತಿ
ಉಡುಪಿ: ಕಲ್ಸಂಕ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಜಲ್ಲಿಕಲ್ಲುಗಳೆಲ್ಲ ಕಿತ್ತುಹೋಗಿ, ರಸ್ತೆಯ ಒಳಗಿದ್ದ ಕಬ್ಬಿಣದ ಸರಳುಗಳು ಮೇಲೆದ್ದು ಸುಗಮ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿತ್ತು.
ಈ ಬಗ್ಗೆ 'ಪಬ್ಲಿಕ್ ನೆಕ್ಸ್ಟ್' ಸಾರ್ವಜನಿಕ ಹಿತದೃಷ್ಟಿಯಿಂದ ಸವಿವರವಾದ ವರದಿ ಪ್ರಕಟಿಸಿತ್ತು. ಇದೀಗ ವರದಿಗೆ ಪೂರಕವಾಗಿ ಸ್ಪಂದಿಸಿದ ನಗರಸಭೆಯು ಅಪಾಯ ಆಹ್ವಾನಿಸುತ್ತಿದ್ದ ಈ ಕಬ್ಬಿಣದ ಸರಳುಗಳನ್ನೆಲ್ಲ ಕತ್ತರಿಸಿ ತೆಗೆದು ಸರಾಗ, ಅಪಾಯ ರಹಿತ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ಈ ಸಮಸ್ಯೆ ಬಗೆಹರಿಸುವ ಕುರಿತು ಜಿಲ್ಲಾ ನಾಗರಿಕ ಸಮಿತಿಯ ಕ್ರಿಯಾಶೀಲ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಅವರು ಆಡಳಿತಕ್ಕೆ ಆಗ್ರಹಿಸಿದ್ದರು.
Kshetra Samachara
26/02/2021 01:06 pm