ಸುಳ್ಯ: ಆ.20ರ ಶನಿವಾರ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಹಿರಿಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ಸುಳ್ಯ ಉಪವಿಭಾಗದ ಉಬರಡ್ಕ, ಮಿತ್ತೂರು ಗ್ರಾಮದಲ್ಲಿ ಪೂ.11ರಿಂದ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಸುಬ್ರಹ್ಮಣ್ಯ ಉಪವಿಭಾಗದ ಬಳ್ಪ ಗ್ರಾಮದಲ್ಲಿ ಅದಾಲತ್ ನಡೆಯಲಿದೆ.
ಜಿಲ್ಲೆಯಲ್ಲಿ ಇನ್ನುಳಿದಂತೆ ಮಂಗಳೂರು ತಾಲೂಕಿನ ಮಲ್ಲೂರು, ಮಂಜನಾಡಿ, ಆದ್ಯಪಾಡಿ, ಬಾಳ, ಕೊಳಂಬೆ. ಮುಲ್ಕಿ ತಾಲೂಕಿನ ಹತ್ತನೆ ತೋಕುರು. ಮೂಡಬಿದ್ರೆ ತಾಲೂಕಿನ ಇರುವೈಲ್. ಬಂಟ್ವಾಳ ತಾಲೂಕಿನ ನರಿಕೊಂಬು, ಪಂಜಿಕಲ್ಲು, ಪೆರ್ನೆ, ಬೆಳ್ತಂಗಡಿ ತಾಲೂಕಿನ ಕಲ್ಮಂಜ, ಪಾರೆಂಕಿ. ಪುತ್ತೂರು ತಾಲೂಕಿನ ಬಲ್ನಾಡು, ಅಗರ್ತಬೈಲು, ನಿಡ್ಪಳ್ಳಿ. ಕಡಬ ತಾಲೂಕಿನ ಕೋಣಾಜೆ ಗ್ರಾಮಗಳಲ್ಲಿ ಅದಾಲತ್ ನಡೆಯಲಿದೆ. ಗ್ರಾಮಗಳಿಗೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ವಿದ್ಯುತ್ ಅದಾಲತ್ ನಡೆಸಲಿದ್ದಾರೆ,ಗ್ರಾಹಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
Kshetra Samachara
17/08/2022 08:13 pm