ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿಶ್ವಕರ್ಮ ಸಮುದಾಯಕ್ಕೆ ಬಿಜೆಪಿ ಸರಕಾರದಿಂದ ಮೋಸ: ಮುಖಂಡರಿಂದ ಆರೋಪ

ಉಡುಪಿ: ಬಿಜೆಪಿ ಸರಕಾರದ ಮೇಲೆ ವಿಶ್ವಕರ್ಮ ಸಮುದಾಯ ಸಾಕಷ್ಟು ಭರವಸೆ ಇಟ್ಟಿತ್ತು. ಆದರೆ, ಬಿಜೆಪಿ ಸರಕಾರ ಮತಕ್ಕಾಗಿ ನಮ್ಮನ್ನು ಬಳಸಿಕೊಂಡಿದೆಯೇ ಹೊರತು ಯಾವುದೇ ವ್ಯವಸ್ಥೆ ಮಾಡಿಕೊಟ್ಟಿಲ್ಲ ಎಂದು ವಿಶ್ವಕರ್ಮ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲ ಭಾರತ ವಿಶ್ವಕರ್ಮ ಮಹಾಸಭಾದ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ ಮತ್ತು ಎಚ್. ರಮೇಶ್ ಆಚಾರ್ಯ ಹೆಬ್ರಿ ಅವರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯ ಬಹಳಷ್ಟು ಯುವಕರಿಗೆ ಉದ್ಯೋಗ ಇಲ್ಲ. ಜಾತಿ ಮತ ಧರ್ಮ ಎಂದು ನಮ್ಮ ಯುವಕರನ್ನು ಚುನಾವಣೆ ಸಂದರ್ಭ ದುಡಿಸಿಕೊಳ್ಳುತ್ತಾರೆ. ಆದರೆ, ಅವರ ಅರ್ಹತೆಗೆ ಉದ್ಯೋಗ ನೀಡಿಲ್ಲ.ರಕ್ತಗತವಾಗಿ ಬಂದಿರುವ ಕೆಲಸ ಮಾಡಲು ಸರಕಾರ ಯಾವುದೇ ಯೋಜನೆ ರೂಪಿಸಿಲ್ಲ. ನಾವು ರಾಜಕೀಯವಾಗಿ ಬೆಳೆಯಲು ಸಾಧ್ಯವೇ ಇಲ್ಲ. ಪಂಚ ಕುಲಕಸುಬು ಉಳಿಸುವ ನಿಟ್ಟಿನಲ್ಲಿ ಸರಕಾರ ಯೋಜನೆ ರೂಪಿಸುವುದನ್ನು ಬಿಟ್ಟು ಧರ್ಮ, ರಾಜಕೀಯದ ಕೆಲಸಗಳಿಗೆ ಯುವಕರನ್ನು ಬಳಸಿಕೊಂಡಿದೆ. ನಮ್ಮ ಕೈಗೆ ಉದ್ಯೋಗ ಕೊಡಿ ಎಂದು ಆಗ್ರಹಿಸಿದ್ದಾರೆ.

ಸಮುದಾಯದ ರಾಜ್ಯ ನಾಯಕ ಕೆ.ಪಿ. ನಂಜುಂಡಿ ನಾಯಕತ್ವದಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಸಂಚಾರ ಮಾಡಿ ಸಮಾಜದ ಜನರಿಗೆ‌ ಮನದಟ್ಟು ಮಾಡುವ ಕೆಲಸ ಮಾಡಲಿದ್ದೇವೆ. ನಾಲ್ಕರಿಂದ ಐದು ಲಕ್ಷ ಜನ ಸೇರಿ ಬೃಹತ್ ಸಮಾವೇಶ ಮಾಡಿ ನಮ್ಮ ಮುಂದಿನ ನಡೆ ತೀರ್ಮಾನಿಸಲಿದ್ದೇವೆ ಎಂದು ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

19/09/2020 02:16 pm

Cinque Terre

17.51 K

Cinque Terre

3

ಸಂಬಂಧಿತ ಸುದ್ದಿ