ಉಡುಪಿ: ಉಡುಪಿಯ ಸುಸಿ ಗ್ಲೋಬಲ್ ರೀಸರ್ಚ್ ಸೆಂಟರ್ ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಬಗ್ಗೆ ಕಳೆದ ಹಲವು ವರ್ಷಗಳಿಂದ ಕಠಿಣ ಪ್ರಯೋಗ ಹಾಗೂ ಪರಿಶ್ರಮದಲ್ಲಿ ತೊಡಗಿಕೊಂಡಿತ್ತು.
ಈಗಾಗಲೇ ಈ ಪ್ರಯೋಗಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. 2015ರಲ್ಲಿ ಸಮುದ್ರದಲ್ಲಿ ಕದಿಕೆ ಸಮುದ್ರ ಕಿನಾರೆಯಲ್ಲಿ ಪ್ರಾಯೋಗಿಕ ಯೋಜನೆ ನಡೆಸಿ ಸಂಸ್ಥೆ ಅದರಲ್ಲಿ ಯಶಸ್ವಿಯಾಗಿತ್ತು ಆ ಬಳಿಕ ತಾಂತ್ರಿಕ ಸಂಶೋಧನೆಗಳನ್ನು ಮಾಡಿ ಮತ್ತಷ್ಟು ಅಭಿವೃದ್ಧಿಪಡಿಸಿ ಇದೀಗ ಪೂರ್ಣಪ್ರಮಾಣದ ವಿದ್ಯುತ್ ಉತ್ಪಾದನಾ ಮತ್ತು ಸಂಶೋಧನಾ ಘಟಕವನ್ನು ಉಡುಪಿ ಜಿಲ್ಲೆಯ ಕದಿಕೆ ಸಮುದ್ರ ಕಿನಾರೆಯಲ್ಲಿ ಸ್ಥಾಪಿಸಲು ಮುಂದಾಗಿದ್ದು,ಈ ಯೋಜನೆ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ಸುಸಿ ಗ್ಲೋಬಲ್ ರಿಸರ್ಚ್ ಸೆಂಟರ್ ನ ರೂವಾರಿ ವಿಜಯ್ ಕುಮಾರ್ ಹೇಳಿದ್ದಾರೆ.
ಇಂದು ಈ ಯೋಜನೆ ಕುರಿತು ಮಾಹಿತಿ ನೀಡಿದ ವಿಜಯಕುಮಾರ್ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದನೆ ಮಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಹೀಗಾಗಿ ನನ್ನ ಅನೇಕ ವರ್ಷಗಳ ಕನಸು ನನಸಾಗಿದೆ. ಇನ್ನು ಕೆಲವೇ ದಿನದಲ್ಲಿ ಉಡುಪಿ ಜಿಲ್ಲೆಯ ಕಡಲತೀರ ಮಾತ್ರವಲ್ಲ,ಕದಿಕೆ ಸಮುದ್ರ ಕಿನಾರೆ ಪ್ರಪಂಚದ ಅತಿದೊಡ್ಡ ಅಲೆಗಳಿಂದ ವಿದ್ಯುತ್ ಉತ್ಪಾದನಾ ಸಂಶೋಧನಾ ಕೇಂದ್ರವಾಗಲಿದೆ ಎಂದು ಹೇಳಿದರು.
ಇದರ ಪೂರ್ವಭಾವಿಯಾಗಿ ನಾಳೆ ಬೆಳಿಗ್ಗೆ ಸಮುದ್ರಕಿನಾರೆಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಸುಸಿ ಗ್ಲೋಬಲ್ ರಿಸರ್ಚ್ ಸೆಂಟರ್, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಮತ್ತು ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಸಹಯೋಗದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
Kshetra Samachara
09/11/2020 08:11 pm