ಬ್ರಹ್ಮಾವರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಇವರ ವತಿಯಿಂದ ಮಂಗಳವಾರ ವಾರಂಬಳ್ಳಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ವಲಯ ಮಟ್ಟದ ಪೋಷಣ ಮಾಸಾಚರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಫರಝಾನಾ ಮಾತನಾಡಿ ಯಾವುದೇ ವ್ಯಕ್ತಿ ಸೇವಿಸುವ ಆಹಾರ ಸಮತೋಲನ ಸಮತೂಕದ ನಿಯಮಿತ ಆಹಾರ ಬಳಕೆ ಮಾಡಬೇಕು. ಆಹಾರದ ಜೊತೆ ಸ್ವಚ್ಛತೆಗೆ ಕೂಡಾ ಗಮನ ಹರಿಸಬೇಕು ಮಕ್ಕಳ ಬೆಳವಣಿಗೆಗೆ ನೀಡುವ ಪೋಷಕಾಂಶದಂತೆ ಹಿರಿಯರು ಕೂಡಾ ಆಹಾರ ವನ್ನು ನಿಯಮಿತವಾಗಿ ಬಳಸ ಬೇಕು ಎಂದರು.
ವಾರಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗವೇಣಿ ಪಂಡರಿನಾಥ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ, ಅಜಿತ್ ಕುಮಾರ್ ಶೆಟ್ಟಿ, ಗ್ರಾಮ ಲೆಕ್ಕಿಗರಾದ ಐರಿನ್ ಶಾಂತಿ ಪಿರೇರಾ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸಿಂಧು ಶೆಟ್ಟಿ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆಯರಿಂದ ನಾನಾ ತರಕಾರಿ ಬೆಳೆಗಳು, ಧಾನ್ಯಗಳು, ಸೊಪ್ಪು ತರಕಾರಿಗಳು ಮತ್ತು ನಾನಾ ತಿನಿಸುಗಳು ಪ್ರದರ್ಶನದಲ್ಲಿದ್ದು ಧಾನ್ಯದಿಂದಲೆ ರಚಿಸಿದ ಮಹಿಳೆಯ ಚಿತ್ರ ಎಲ್ಲರ ಗಮನಸೆಳೆಯಿತು. ಗ್ರಾಮ ಪಂಚಾಯತಿ ಸದಸ್ಯರು, ಆರೋಗ್ಯ ಕಾರ್ಯಕರ್ತೆಯರು, ಆಶಾ, ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರುಗಳು ಹಾಜರಿದ್ದರು.
Kshetra Samachara
20/09/2022 08:19 pm