ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ: ಕುಕ್ಕೆಯಲ್ಲಿ ಜನ ಸಂದಣಿ; ರೂಂ ಸಿಗದೇ ರಸ್ತೆಯಲ್ಲೇ ಮಲಗಿದ ಭಕ್ತರು!

ಸುಬ್ರಹ್ಮಣ್ಯ: ಸಾಲು ಸಾಲು ರಜೆ, ಮತ್ತೊಂದೆಡೆ ವಾರಾಂತ್ಯವೂ ಆಗಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ನಾಗ ಕ್ಷೇತ್ರವಾಗಿರುವ ಸುಬ್ರಹ್ಮಣ್ಯಕ್ಕೆ ಭಕ್ತ ಸಂದಣಿಯೇ ಆಗಮಿಸಿದೆ!

ಇಂದು ರಾತ್ರಿ ವಸತಿಗೆ ರೂಮ್ ಸಿಗದೇ ರಸ್ತೆಯಲ್ಲಿ ಹಾಗೂ ದೇವಸ್ಥಾನದ ಹಾಲ್ ಗಳಲ್ಲಿ ಭಕ್ತರು‌ ಮಲಗಿರೋ ದೃಶ್ಯ ಕಂಡು ಬಂತು. ಆದ್ರೆ, ಮಳೆ ಬಂದರೆ ರಸ್ತೆಯಲ್ಲಿ ಮಲಗೋದು ಕಷ್ಟ. ಸುಬ್ರಹ್ಮಣ್ಯದಲ್ಲಿ ದೇವಸ್ಥಾನದ ಹಾಗೂ ಖಾಸಗಿಯವರ ಹಲವು ವಸತಿ ಗೃಹಗಳಿವೆ.

ದೇವಸ್ಥಾನದ ಸಭಾಂಗಣಗಳಿವೆ. ಹಳೆ ಪ್ರಾಥಮಿಕ ಶಾಲಾ ಕಟ್ಟಡ ಇದೆ. ಆದರೂ ಭಕ್ತರು ರಥಬೀದಿಯಲ್ಲಿ ಹಾಗೂ ಧರ್ಮಸಮ್ಮೇಳನದ ಮಂಟಪದಲ್ಲಿ ಮಲಗಿದ್ದಾರೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಗ್ರಾಪಂ ಸದಸ್ಯರಾದ ಹರೀಶ ಇಂಜಾಡಿ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

17/04/2022 04:28 pm

Cinque Terre

9.99 K

Cinque Terre

0

ಸಂಬಂಧಿತ ಸುದ್ದಿ