ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ 2 ತಿಂಗಳ ಅವಧಿಯಲ್ಲಿ ಭಕ್ತರಿಂದ ಸಂಗ್ರಹವಾದ ಹುಂಡಿ ಕಾಣಿಕೆ ಹಣದ ಲೆಕ್ಕಾಚಾರ ನಡೆಯಿತು.
ಕೊರೊನಾ ಮುನ್ನೆಚ್ಚರಿಕೆ ಇದ್ದರೂ ಕೂಡ ಭಕ್ತರು ನಿರಂತರವಾಗಿ ಕ್ಷೇತ್ರ ದರ್ಶನ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಬಾರಿ ದಾಖಲೆಯ 1.36 ಕೋಟಿ ರೂ. ಸಂಗ್ರಹವಾಗಿದೆ. ನ. 10ರಂದು ಹುಂಡಿಯಲ್ಲಿ 585 ಗ್ರಾಂ ಚಿನ್ನ ಹಾಗೂ 6,400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. 2020ನೇ ಸಾಲಿನ ನವರಾತ್ರಿಯಂದು 92,00,000 ರೂ. ಸಂಗ್ರಹವಾಗಿತ್ತು. ಚಿನ್ನ 615 ಗ್ರಾಂ ಹಾಗೂ ಬೆಳ್ಳಿ 3,500 ಗ್ರಾಂ ಸಂಗ್ರಹವಾಗಿತ್ತು. 3 ವರ್ಷಗಳ ಹಿಂದೆ 3 ತಿಂಗಳ ಅವಧಿಯಲ್ಲಿ 1.11 ಕೋಟಿ ರೂ. ಹುಂಡಿ ಹಣ ಸಂಗ್ರಹ ದಾಖಲೆಯಾಗಿದ್ದರೆ, ಈದೀಗ ಕೊರೊನಾ ಸಂದರ್ಭ ಕೇವಲ 52 ದಿನಗಳಲ್ಲಿ 1.36 ಕೋಟಿ ರೂ. ಸಂಗ್ರಹವಾಗಿದೆ.
Kshetra Samachara
12/11/2021 04:32 pm