ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಭಾರಿ ಮಳೆಗೆ ಸೇತುವೆ ಕುಸಿತ : ಮಾಳ- ನೂರಾಳ್ ಬೆಟ್ಟು ಸಂಪರ್ಕ ಕಟ್

ಕಾರ್ಕಳ: ಮಂಗಳವಾರ ಸುರಿದ ಭಾರಿ ಮಳೆಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಚೌಕಿ ಬಳಿಯ ಪೂಂಜಾಜೆ ಎಂಬಲ್ಲಿನ ಸೇತುವೆ ಕುಸಿದಿದ್ದು ಮಾಳ ನೂರಾಳು ಬೆಟ್ಟು ಸಂಪರ್ಕ ಕಡಿತಗೊಂಡಿದೆ.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಳೆದ 12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಸೇತುವೆಯ ಪಿಲ್ಲರ್ ದುರ್ಬಲಗೊಂಡು ಸೇತುವೆಯ ಮಧ್ಯಭಾಗವೇ ಕುಸಿದು ಬಿದ್ದು ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ.

ಮಾಳ ಹಾಗೂ ಈದು ಗ್ರಾಮಗಳ ಸಂಪರ್ಕ ಕೊಂಡಿಯಾಗಿದ್ದ ಈ ಸೇತುವೆ ಕುಸಿತದಿಂದ ಜನರ ಓಡಾಟಕ್ಕೆ ತೊಡಕಾಗಿದ್ದು, ಸೇತುವೆ ದುರಸ್ತಿಗೆ ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲೇ ಸೇತುವೆ ದುರಸ್ತಿಗೊಳಿಸುವ ಭರವಸೆ ನೀಡಿದ್ದಾರೆ.

ವರದಿ: ಕೃಷ್ಣ ಅಜೆಕಾರು

Edited By : Manjunath H D
Kshetra Samachara

Kshetra Samachara

06/09/2022 09:11 pm

Cinque Terre

7.27 K

Cinque Terre

0

ಸಂಬಂಧಿತ ಸುದ್ದಿ