ಬೈಂದೂರು:ಎರಡು ವಾರಗಳ ಕಾಲ ವಿರಾಮ ನೀಡಿದ್ದ ಮಳೆ ಉಡುಪಿ ಜಿಲ್ಲೆಯಲ್ಲಿ ಜಡಿದು ಬರುತ್ತಿದೆ. ನಿನ್ನೆ ಸಂಜೆಯಿಂದ ಸತತ ಮಳೆಯಾಗುತ್ತಿದ್ದು ಕುಂದಾಪುರ ಮತ್ತು ಬೈಂದೂರಿನ ಹಲವೆಡೆ ಕೃತಕ ನೆರೆ ಸೃಷ್ಡಿಯಾಗಿದೆ.ಹಲವು ಮನೆಗಳು ಜಲದಿಗ್ಬಂಧನಕ್ಕೊಳಗಾಗಿವೆ. ಭಾರೀ ಮಳೆಗೆ ಶಿರೂರು ಗ್ರಾಮದಲ್ಲಿ ಹಲವೆಡೆ ರಸ್ತೆ, ಮನೆ, ವಾಹನಗಳು ಜಲಾವೃತಗೊಂಡಿದ್ದು ಅಪಾರ ನಷ್ಟ ಸಂಭವಿಸಿದೆ.
ಇನ್ನು ಶಿರೂರು ಸಮುದ್ರ ತೀರದಲ್ಲಿ ನಿಲ್ಲಿಸಿದ್ದ 50 ಕ್ಕೂ ಅಧಿಕ ದೋಣಿಗಳಿಗೆ ಹಾನಿಯಾಗಿದ್ದು ಮೀನುಗಾರರಿಗೆ ಲಕ್ಷಾಂತರ ರೂ ನಷ್ಟವಾಗಿದೆ.ಈ ಭಾಗದಲ್ಲಿ ಅಗ್ನಿಶಾಮಕ ಸಿಬ್ಬಂದಿ ಜನರ ನೆರವಿಗೆ ಧಾವಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅಧಿಕಾರಿಗಳ ಜೊತೆಗೆ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಎರಡು ವಾರಗಳ ಹಿಂದೆ ಈ ಭಾಗದಲ್ಲಿ ಇಂತಹದ್ದೇ ಮಳೆಯಾಗಿ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿತ್ತು.
Kshetra Samachara
02/08/2022 03:40 pm