ಬ್ರಹ್ಮಾವರ: ಬಾರ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗಾಳಿಮಳೆಗೆ ಮರ ಬಿದ್ದು ಮನೆಗೆ ಹಾನಿಯಾದ ಘಟನೆ ಸಂಭವಿಸಿದೆ. ಸ್ಥಳೀಯ ಕಚ್ಚೂರು ಕೃಷ್ಣ ನಾಯಕರ ಮನೆಯ ಮೇಲೆ ಗುರುವಾರ ರಾತ್ರಿ ಬಂದ ಭಾರೀ ಗಾಳಿಗೆ 150 ವರ್ಷ ಹಳೆಯದಾದ ಅಶ್ವತ್ಥ ಮರದ ಕೊಂಬೆಯೊಂದು ಬಿದ್ದಿದೆ.
ಇದರ ಪರಿಣಾಮ ಅಡುಗೆ ಮನೆಯ ಮಾಡಿನ ಹೆಂಚು ಮತ್ತು ಪಕ್ಕಾಸು ತುಂಡಾಗಿದೆ. ರಾತ್ರಿ ಹೊತ್ತು ಮನೆಯವರೆಲ್ಲ ಕೋಣೆಯಲ್ಲಿ ಮಲಗಿದ್ದರೂ ಅದೃಷ್ಟವಶಾತ್ ಯಾವುದೇ ಗಾಯಗಳಾಗಲಿ ಜೀವ ಹಾನಿಯಾಗಲಿ ಸಂಭವಿಸಿಲ್ಲ. ಬಾರಕೂರು ಗ್ರಾಮ ಲೆಕ್ಕಿಗ ಬೀಮರಾಜ್ ಘಟನೆ ಸ್ಥಳಕ್ಕೆ ಬೇಟಿ ನೀಡಿ ಹಾನಿಯ ವರದಿ ಮಾಡಿದ್ದಾರೆ
Kshetra Samachara
16/07/2022 01:54 pm