ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮರ ಬಿದ್ದು ಮೂಡಬಿದ್ರೆ ಮುಲ್ಕಿ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಕೆಂಚನಕೆರೆ:ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ತಿರುವು ಬಳಿ ಶನಿವಾರ ಬೆಳಿಗ್ಗೆ ಬೀಸಿದ ಗಾಳಿ ಹಾಗೂ ಮಳೆಗೆ ಬಾರಿ ಗಾತ್ರದ ಮರ ಬಿದ್ದು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಹೆದ್ದಾರಿಯಲ್ಲಿ ಮರ ಬಿದ್ದ ಕಾರಣ ಕಿನ್ನಿಗೋಳಿ,ಮೂಡಬಿದ್ರೆ ಕಟೀಲು ಕಡೆಯಿಂದ ಮುಲ್ಕಿ ಕಡೆಗೆ ಬರುವ ವಾಹನಗಳು ಹಾಗೂ ಮುಲ್ಕಿಯಿಂದ ಹೋಗುವ ವಾಹನಗಳು ಕೆರೆಕಾಡು ಭಜನಾ ಮಂದಿರದ ಒಳ ರಸ್ತೆ ಮೂಲಕ ಸುತ್ತು ಬಳಸಿ ಸಂಚಾರ ನಡೆಸಿದವು.

ಹೆದ್ದಾರಿಗೆ ಮರ ಬಿದ್ದ ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಭಾಸ್ಕರ ಶೆಟ್ಟಿಗಾರ್, ಗಣೇಶ್ ಮತ್ತಿತರರು ಸೇರಿಕೊಂಡು ಭಾರೀ ಮಳೆ ನಡುವೆ ಮರವನ್ನು ಕಡಿದು ತಾತ್ಕಾಲಿಕ ನೆಲೆಯಲ್ಲಿ ತೆರವುಗೊಳಿಸಿದ್ದಾರೆ.

ರಾಜ್ಯ ಹೆದ್ದಾರಿ ಸಂಚಾರ ಗಂಟೆಗಟ್ಟಲೆ ತಡೆಯಾಗಿದ್ದರೂ ಯಾವೊಬ್ಬ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ, ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಬದಿಯಲ್ಲಿ ಇನ್ನಷ್ಟು ಅಪಾಯಕಾರಿ ಮರಗಳಿದ್ದು ರಸ್ತೆಗೆ ಬಿದ್ದು ಅನೇಕ ಬಾರಿ ಅವಘಡ ಸಂಭವಿಸಿದರೂ ಅರಣ್ಯ ಇಲಾಖೆ ಮರಗಳನ್ನು ತೆರವುಗೊಳಿಸಲು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
Kshetra Samachara

Kshetra Samachara

16/07/2022 11:58 am

Cinque Terre

10.81 K

Cinque Terre

0

ಸಂಬಂಧಿತ ಸುದ್ದಿ