ಮಂಗಳೂರು: ಸುರಿಯುತ್ತಿರುವ ಭಾರಿ ಮಳೆಗೆ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆಯಿಂದ ಪಟ್ಟೆಗೆ ಸಂಪರ್ಕಿಸುವ ಕಾಲುದಾರಿಯ ಕಿರು ಸೇತುವೆ ಸಂಪರ್ಕ ಕಡಿತಗೊಂಡಿದೆ.
ಸಂಪರ್ಕ ಕಡಿತದಿಂದ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.ಸಮೀಪದಲ್ಲೇ ಶ್ರೀಲಕ್ಷ್ಮಿಜನಾರ್ದನ ದೇವಸ್ಥಾನವಿದ್ದು ಪಟ್ಟೆ ಪರಿಸರದ ಹಲವಾರು ಭಕ್ತರು ದೇವಸ್ಥಾನಗಳಿಗೆ ಆಗಮಿಸುತ್ತಿದ್ದು, ಈ ಕಿರು ಸೇತುವೆಯ ಮೂಲಕ ಹಾದು ಹೋಗಬೇಕಿದೆ.ಇನ್ನೂ ಏಳಿಂಜೆ ದಾಮಸ್ ಕಟ್ಟೆ ಶಾಲೆಗೆ ಬರುವ ಮಕ್ಕಳು ಇದೇ ಕಿರು ಸೇತುವೆಯಲ್ಲಿ ಬರಬೇಕು. ಭಾರಿ ಮಳೆ ಬಂದರೆ ಸಾಕು ಸೇತುವೆ ಕುಸಿತದಿಂದ ಸುತ್ತು ಬಳಸಿಕೊಂಡು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಇನ್ನು ಈ ಕಿರು ಸೇತುವೆ ಅಲ್ಲಲ್ಲಿ ಬಿರುಕುಬಿಟ್ಟಿದ್ದು ಸೇತುವೆ ಕುಸಿದು ಕೆಲವು ವರ್ಷಗಳಾದರೂ ನೂತನ ಸೇತುವೆ ನಿರ್ಮಾಣವಾಗಿಲ್ಲ. ಈ ನಡುವೆ ಕುಸಿತವಾದ ಸೇತುವೆಯು ಇನ್ನೊಂದು ಪಾಶ್ವ ಜಲಾವೃತವಾಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಕಳೆದ 4 ವರ್ಷಗಳಿಂದ ಕಿರು ಸೇತುವೆ ನಿರ್ಮಾಣಕ್ಕೆ ಸ್ಥಳೀಯರು, ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ. ಇದುವರೆಗೂ ಯಾವುದೇ ಪ್ರಯೋಜನ ವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟವರು ಕಿರು ಸೇತುವೆ ಮರು ನಿರ್ಮಾಣದ ಬಗ್ಗೆ ಇದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Kshetra Samachara
13/07/2022 12:42 pm