ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ‌‌‌‌‌.ಜಿಲ್ಲೆಯಲ್ಲಿ ಮುಂದುವರೆದ ರೆಡ್ ಅಲರ್ಟ್: ದುಬೈನಿಂದ ಬಂದ ವಿಮಾನ ಕೊಚ್ಚಿನ್ ಗೆ ಡೈವರ್ಟ್

ಮಂಗಳೂರು: ದ‌.ಕ.ಜಿಲ್ಲೆಯಲ್ಲಿ ನಿರಂತರ ಆರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಇಂದು ಕೂಡಾ ರೆಡ್ ಅಲರ್ಟ್ ಘೋಷಣೆಯಾಗಿದೆ.

ನಾಳೆ ಬೆಳಗ್ಗಿನವರೆಗೆ ರೆಡ್ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ‌. ನಿರಂತರವಾಗಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿಗಳಾದ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ, ನಂದಿನಿ ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದೆ. ಹಲವೆಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಕೆಲವೆಡೆ ಭೂಕುಸಿತವುಂಟಾಗಿ, ಮರಗಳು ಬಿದ್ದು ಅಪಾರ ಹಾನಿಗಳಾಗಿವೆ. ಮಳೆಯಬ್ಬರಕ್ಕೆ ಕಡಲ್ಕೊರೆತವುಂಟಾಗಿ ಭೀತಿ ಸೃಷ್ಟಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂದಿನವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ದುಬೈನಿಂದ ಆಗಮಿಸಿರುವ ವಿಮಾನವನ್ನು ಕೊಚ್ಚಿನ್ ಗೆ ಡೈವರ್ಟ್ ಮಾಡಲಾಗಿದೆ. ದುಬೈನಿಂದ ಬಂದಿರುವ ಮಂಗಳೂರಿಗೆ ಆಗಮಿಸಿರುವ ಸ್ಪೈಸ್ ಜೆಟ್ ವಿಮಾನ ರಾತ್ರಿ 9:30 ಗೆ ತಲುಪಿದೆ. ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಮಾಡಲು ಸಾಧ್ಯವಾಗದೆ ಕೊಚ್ಚಿನ್ ಗೆ ಡೈವರ್ಟ್ ಮಾಡಲಾಗಿದೆ.

Edited By :
Kshetra Samachara

Kshetra Samachara

09/07/2022 12:47 pm

Cinque Terre

13.42 K

Cinque Terre

0

ಸಂಬಂಧಿತ ಸುದ್ದಿ