ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪಡುಬಿದ್ರಿ ಕೆಳಗಿನ ಪೇಟೆಯಲ್ಲಿ ಕೃತಕ ನೆರೆ- ದೇವಸ್ಥಾನ, ಮನೆ, ಅಂಗಡಿಗಳಿಗೆ ನುಗ್ಗಿದ ನೀರು

ಕಾಪು: ಪಡುಬಿದ್ರಿ ಕೆಳಗಿನ ಪೇಟೆ ಪ್ರದೇಶದಲ್ಲಿ ಉದ್ಭವಗೊಂಡ ಕೃತಕ ನೆರೆಯಿಂದಾಗಿ ರಸ್ತೆ ಮುಳುಗಡೆಗೊಂಡು ದೇವಳ ಸಹಿತ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ಜನರು ಸಮಸ್ಯೆ ಅನುಭವಿಸುತ್ತಿದ್ದರೂ ಜಿಲ್ಲೆಯ ಯಾವುದೇ ಅಧಿಕಾರಿಗಳು ಹತ್ತಿರ ಸುಳಿಯದೆ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾದ ದಿನದಿಂದ ಈ ಭಾಗದಲ್ಲಿ ಕೃತಕ ನೆರೆ ಸಮಸ್ಯೆ ಜನರನ್ನು ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಂಟರ ಸಂಘದ ಮುಂಭಾಗ ಬೃಹತ್ ಮಳೆ ನೀರು ಹರಿದು ಹೋಗುತ್ತಿದ್ದ ಚರಂಡಿಗೆ ಸಣ್ಣ ಗಾತ್ರದ ಪೈಪ್ ಅಳವಡಿಸಿ ಮುಚ್ಚಿರುವುದು. ಇಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಅನಾಹುತ ಸೃಷ್ಠಿಯಾಗಿದೆ. ಇದನ್ನು ಕಳೆದ ಮೂರು ವರ್ಷಗಳಿಂದಲೂ ಈ ಭಾಗದ ಗ್ರಾ.ಪಂ. ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರು ಕೃತಕ ನೆರೆಯಿಂದ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ಕಾಪು ತಹಶೀಲ್ದಾರರ ಗಮನಕ್ಕೆ ತಂದರೆ ಅವರು ಮಳೆಗಾಲಕ್ಕೆ ಇದೆಲ್ಲ ಮಾಮೂಲು ಎನ್ನುವ ಮೂಲಕ ತಮ್ಮ ಜವಾಬ್ದಾರಿ ಮರೆತು ಮಾತನಾಡಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಗಣೇಶ್ ಕೋಟ್ಯಾನ್ ಬೇಸರ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/06/2022 08:15 pm

Cinque Terre

7.54 K

Cinque Terre

0

ಸಂಬಂಧಿತ ಸುದ್ದಿ