ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ನಿರಂತರ ವರ್ಷಧಾರೆ; ಮನೆಗಳು ಜಲಾವೃತ, ಸಂಚಾರ ದುಸ್ತರ

ವಿಟ್ಲ: ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳು ಜಲಾವೃತವಾಗಿದೆ. ಅಡ್ಡದ ಬೀದಿ, ಬೊಬ್ಬೆಕೇರಿ ವಿದ್ಯಾನಗರದಲ್ಲಿರುವ ಮನೆಗಳ ಸುತ್ತ ನೀರು ತುಂಬಿಕೊಂಡಿದೆ.

ಬಾಕಿಮಾರ್ ಗದ್ದೆ ಪಕ್ಕದಲ್ಲಿರುವ ಚರಂಡಿಯಲ್ಲಿ ಮೆಸ್ಕಾಂ ಗುತ್ತಿಗೆದಾರರು ಕಾಮಗಾರಿ ನಡೆಸುವ ವೇಳೆ ಪೈಪುಗಳನ್ನು ಚರಂಡಿ ಮೂಲಕ ಅಳವಡಿಸಿದ್ದರಿಂದ ನೀರು ಹರಿಯದೆ ಪಕ್ಕದ ಮನೆ, ಅಂಗಡಿ ಆವರಣಕ್ಕೆ ನುಗ್ಗಿದೆ.

ಬೊಬ್ಬೆಕೇರಿ ವಿದ್ಯಾನಗರದಲ್ಲಿರುವ ಮೋನಪ್ಪ ಶೆಟ್ಟಿ, ದಿನೇಶ್ ಪೂಜಾರಿ, ನಾರಾಯಣ ಗೌಡ, ನಾರಾಯಣ ಪೂಜಾರಿ ಮತ್ತಿತರರ ಮನೆಗಳಿಗೆ ಮಳೆನೀರು ನುಗ್ಗಿದೆ.

ಕೆಲವು ವ್ಯಕ್ತಿಗಳು ಚರಂಡಿ ಒತ್ತುವರಿ ಮಾಡಿದ್ದರಿಂದ ಮತ್ತು ಹೆದ್ದಾರಿ ಕಾಮಗಾರಿ ವೇಳೆ ಚರಂಡಿ ಮುಚ್ಚಿದ್ದರಿಂದ ನೀರು ಹರಿಯಲು ವ್ಯವಸ್ಥೆ ಇಲ್ಲದೆ ಕೃತಕ ನೆರೆಯೇ ಸೃಷ್ಟಿಯಾಗಿದೆ. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಗೆ ಹೋಗುವ ಒಳದಾರಿ ಕೂಡ ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/06/2022 03:01 pm

Cinque Terre

15.83 K

Cinque Terre

0

ಸಂಬಂಧಿತ ಸುದ್ದಿ