ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಧಾರಕಾರ ಮಳೆ; ಕೃಷಿ ತೋಟಕ್ಕೆ ನುಗ್ಗಿದ ನೀರು!

ಸುಳ್ಯ: ಸುಬ್ರಹ್ಮಣ್ಯ ಭಾಗದಲ್ಲಿ ಶುಕ್ರವಾರವೂ ಮಧ್ಯಾಹ್ನ ಬಳಿಕ ಭಾರೀ ಮಳೆಯಾಯಿತು. ರಾತ್ರಿ ವೇಳೆ ಇನ್ನೂ ಹೆಚ್ಚಿನ ಮಳೆಯಾಗಿದ್ದು, ರಸ್ತೆ ಬದಿಯ ಚರಂಡಿಗಳ ನಿರ್ವಹಣೆ ಮಾಡದ ಕಾರಣ ಬಹುತೇಕ ಎಲ್ಲಾ ರಸ್ತೆಗಳಲ್ಲೂ ಸಂಚಾರ ದುಸ್ತರವಾಗಿತ್ತು.

ಸುಳ್ಯ ನಗರ, ಜಾಲ್ಸೂರು, ಕನಕಮಜಲು, ಮಂಡೆಕೋಲು, ಅಜ್ಜಾವರ, ಆಲೆಟ್ಟಿ, ಕಲ್ಲುಗುಂಡಿ, ಸಂಪಾಜೆ, ಅರಂತೋಡು, ಗುತ್ತಿಗಾರು, ಸೋಣಂಗೇರಿ, ಐವರ್ನಾಡು, ಬೆಳ್ಳಾರೆ, ಕಲ್ಮಡ್ಕ, ಎಡಮಂಗಲ, ಪಂಜ, ಮುರುಳ್ಯ, ಬಳ್ಪ, ಸುಬ್ರಹ್ಮಣ್ಯ, ಹರಿಹರ‌ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಿಳಿನೆಲೆ, ಕಡಬದ ಕಲ್ಲುಗುಡ್ಡೆ, ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆ ಭಾಗದಲ್ಲೂ ಭಾರೀ ಮಳೆಯಾಗಿದೆ.ತೋಟಕ್ಕೆ ನುಗ್ಗಿದ ನೀರು.

ಮಾತ್ರವಲ್ಲದೆ ಸಂಜೆ ಸುರಿದ ಬಾರೀ ಮಳೆಗೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿ ಭಾಗದಲ್ಲಿ ಸಣ್ಣ ತೋಡುಗಳಲ್ಲಿ ಬಾರೀ ನೀರು ಬಂದು ಗದ್ದೆ, ಅಡಿಕೆ ತೋಟಗಳಿಗೆ ನುಗ್ಗಿದ ಘಟನೆ ಸಂಭವಿಸಿದೆ. ತೋಟ, ಗದ್ದೆ ಸಂಪೂರ್ಣ ಜಲಾವೃತಗೊಂಡಿತ್ತು. ಪಟ್ಟೆ ಭಾಗದಲ್ಲೂ ಕೃಷಿಭೂಮಿಗೆ ನೀರು ನುಗ್ಗಿದೆ.

Edited By :
Kshetra Samachara

Kshetra Samachara

18/06/2022 07:53 am

Cinque Terre

17.86 K

Cinque Terre

0

ಸಂಬಂಧಿತ ಸುದ್ದಿ