ಮುಲ್ಕಿ: ಮುಲ್ಕಿಯಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಶಿಮಂತೂರು ದೇವಸ್ಥಾನದ ಸಂಪರ್ಕ ರಸ್ತೆಯಲ್ಲಿ ಕೃತಕ ನೆರೆಯ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.
ಕಳೆದ ಹಲವಾರು ವರ್ಷಗಳಿಂದ ಮುಲ್ಕಿ ಕುಬೆವೂರು ಶಿಮಂತೂರು ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ನಾಶದ ಭೀತಿ ಎದುರಿಸುತ್ತಿದೆ. ಕುಬೆವೂರು ಜಾರಂದಾಯ ದೈವಸ್ಥಾನದ ದ್ವಾರದ ಬಳಿ ಮೋರಿಯ ಕಳಪೆ ಕಾಮಗಾರಿಯಿಂದ ರಸ್ತೆ ಹೊಂಡಮಯ ವಾಗಿದ್ದು ಸಂಚಾರ ದುಸ್ತರವಾಗಿದೆ.
ಸರಿಯಾಗಿದ್ದ ಮೋರಿಯನ್ನು ಕೆಡವಿ ಹೊಸ ಮೋರಿಯನ್ನು ಕಳಪೆ ಕಾಮಗಾರಿ ಮೂಲಕ ನಿರ್ಮಿಸಿ ಗುತ್ತಿಗೆದಾರರ ಕಳಪೆ ಕಾಮಗಾರಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಶಾಸಕರು ಎಚ್ಚೆತ್ತು ಶಿಮಂತೂರು ಕುಬೆವೂರು ಪ್ರಧಾನ ರಸ್ತೆಗೆ ಸೂಕ್ತ ಚರಂಡಿ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
22/05/2022 06:52 pm