ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಮೀನುಗಾರಿಕೆ ಬಂದರಿನಲ್ಲಿ ತುಂಬಿದ ಹೂಳು: ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!

ವರದಿ: ರಹೀಂ ಉಜಿರೆ

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೃಹತ್‌ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು ಮೀನು ಗಾರಿಕೆ ಬೋಟ್‌ಗಳ ಲಂಗರು ಮತ್ತು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಹಳ ಸಮಯದಿಂದ ಸಮರ್ಪಕವಾದ ಡ್ರಜ್ಜಿಂಗ್‌ ಕೆಲಸ ನಡೆಯದಿರುವುದರಿಂದ ದಿನದಿಂದ ದಿನಕ್ಕೆ ಸಮಸ್ಯೆ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಬೋಟ್‌ ಮಾಲಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!

ಈ ಹಿಂದೆ ಹೂಳೆತ್ತಿದ್ದ ಸಂಸ್ಥೆಯೊಂದು ಅರ್ಧಂಬರ್ಧ ಕೆಲಸ ಮಾಡಿ ಹಣ ಪಡೆದು ಹೋಗಿದೆ ಎಂದು ಮೀನುಗಾರರು ಆರೋಪಿಸುತ್ತಾರೆ. ಬೆಳಗ್ಗೆ ಮತ್ತು ರಾತ್ರಿ ವೇಳೆ ಬೋಟ್‌ನಿಂದ ಮೀನುಗಳನ್ನು ಇಳಿಸುವ ಕಾರ್ಯ ನಡೆಯುತ್ತಿದೆ. ಬೋಟ್‌ನಿಂದ ಬೋಟ್‌ಗೆ ನಡೆದುಕೊಂಡು ಹೋಗುವ ಸಮಯದಲ್ಲಿ ಆಯ ತಪ್ಪಿ ನೀರಿಗೆ ಬಿದ್ದರೆ ಜೀವಕ್ಕೆ ಮಾತ್ರ ಇಲ್ಲಿ ಯಾವುದೇ ಗ್ಯಾರಂಟಿ ಇಲ್ಲ. ಸುಮಾರು ಆಳದವರೆಗೆ ಕೆಸರು ತುಂಬಿಕೊಂಡಿರುವುದರಿಂದ ಬಿದ್ದ ವ್ಯಕ್ತಿ ಮೇಲೆ ಬರದೆ ನೇರ ಅಡಿಭಾಗವನ್ನು ಸೇರುತ್ತಾನೆ. ಇಂತಹ ಆನೇಕ ಪ್ರಕರಣಗಳು ಮಲ್ಪೆ ಬಂದರಿನಲ್ಲಿ ನಡೆಯುತ್ತಲೇ ಇವೆ.ಆದ್ದರಿಂದ ಶೀಘ್ರ ಇಲ್ಲಿ ಹೂಳೆತ್ತುವಂತೆ ,ಮುಳುಗು ತಜ್ಞ ,ಈಶ್ವರ್ ಮಲ್ಪೆ ಒತ್ತಾಯಿಸಿದ್ದಾರೆ.

Edited By :
PublicNext

PublicNext

13/10/2022 06:05 pm

Cinque Terre

44.56 K

Cinque Terre

1

ಸಂಬಂಧಿತ ಸುದ್ದಿ