ಬೈಂದೂರು : ಭಾರಿ ಮಳೆಯಿಂದಾಗಿ ಜಿಲ್ಲೆಯ ಬೈಂದೂರು ಮತ್ತು ಶಿರೂರು ಪರಿಸರದಲ್ಲಿ ಅಪಾರ ನಷ್ಟ ಸಂಭವಿಸಿದೆ. ಹಲವು ಮನೆ, ದೋಣಿಗಳಿಗೆ ಹಾನಿಯಾಗಿದ್ದು, ಜಾನುವಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಒಟ್ಟಾರೆಯಲ್ಲಿ ಸುಮಾರು 10 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮಂಗಳವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಶಿರೂರು ಕೆಳಪೇಟೆ, ಹಡವಿನಕೋಣೆ, ಕಳಿಹಿತ್ತು, ಅಳೆಗದ್ದೆ ಕುಂಬಾರಕೇರಿ, ಆಲಂದೂರು, ತಗ್ಗರ್ಸೆ,ಬೈಂದೂರು, ಕೊಲ್ಲೂರು ರಸ್ತೆ ಪ್ರದೇಶ ಜಲಾವೃತಗೊಂಡಿತ್ತು. ಈ ಪರಿಸರದ 25ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.
ಕೆಲವು ಕಡೆ ಮನೆ ಕುಸಿತ ಉಂಟಾಗಿದೆ.ಇಂದು ನೆರೆ ನೀರು ತಗ್ಗಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.
Kshetra Samachara
03/08/2022 12:48 pm