ವರದಿ- ರಂಜಿತಾ ಮೂಡಬಿದಿರೆ
ಕಾರ್ಕಳ: ಕಾರ್ಕಳ ತಾಲೂಕಿನ ವಿವಿಧೆಡೆ ಇಂದು ಭಾರೀ ಮಳೆಗೆ ಮನೆಗೋಡೆ ಹಾಗೂ ಮನೆ ಕಂಪೌಂಡ್ ಕುಸಿದು ಸಾವಿರಾರು ರೂ. ನಷ್ಟ ಸಂಭವಿಸಿದೆ.
ಇರ್ವತ್ತೂರು ಗ್ರಾಮದ ವರದೂರು ಎಂಬಲ್ಲಿ ರಮೇಶ್ ಪೂಜಾರಿ ಎಂಬವರ ಮನೆಗೋಡೆ ಕುಸಿದಿದ್ದು ಅಂದಾಜು 25,೦೦೦ ರೂ. ನಷ್ಟ ಸಂಭವಿಸಿದೆ. ಮುಂಡ್ಲಿ ಜಾರ್ಕಳದ ಕಿಟ್ಟಿ ಪೂಜಾರ್ತಿ ಎಂಬವರ ಮನೆಯ ಅಂಗಳ ಮತ್ತು ಕಂಪೌಂಡ್ ಕುಸಿದಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೊಂದರೆಗೆ ಒಳಗಾಗಿರುವ ದುರ್ಗ ಗ್ರಾಮದ ತೆಳ್ಳಾರಿನ ಪ್ರದೇಶಗಳಿಗೆ ಇಂದು ಪಂಚಾಯತ್ ಪ್ರತಿನಿಧಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಡ್ಲಿ ಡ್ಯಾಮ್ ಬಳಿಯ ಜಗದೀಶ್ ಪೂಜಾರಿ, ಚಾರ್ಲ್ಸ್, ಬೆದ್ರಪಲ್ಕೆ ನಿವಾಸಿಗಳಾದ ಅಚ್ಚುತ್ತ ಪೂಜಾರಿ, ಶಶಿ ಆಚಾರ್ತಿ,ಭಾಸ್ಕರ ಆಚಾರ್ಯ, ಗಣಪತಿ ಆಚಾರ್ಯ, ಚಂದ್ರಯ್ಯ ಆಚಾರ್ಯ ರ ಮನೆ ಮತ್ತು ಕೃಷಿ ಜಮೀನುಗಳ ಹಾನಿಯನ್ನು ಪರಿಶೀಲಿಸಲಾಯಿತು.
ದುರ್ಗ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್, ಸದಸ್ಯರಾದ ದೇವಕಿ, ಸಂಧ್ಯಾ, ಗ್ರಾಮ ಲೆಕ್ಕಾಧಿಕಾರಿ ಮೇಘನಾ ಎಂ. ಆರ್, ಸತ್ಯ ನಾರಾಯಣ ಪಡ್ರೆ ಸ್ಥಳೀಯರಾದ ಪ್ರದೀಪ್, ಶಿವಪ್ರಸಾದ್,ಅರುಣ್ ನಾಯಕ್, ವಿಜೇಶ್ ಶೆಟ್ಟಿ, ಗ್ರಾಮ ಸಹಾಯಕ ನವೀನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
09/07/2022 06:36 pm