ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ರಮಣೀಯ ಪ್ರವಾಸಿತಾಣದ ಒಡಲು ಸೇರುತ್ತಿವೆ ಬಿಯರ್ ಬಾಟಲ್, ಪ್ಲಾಸ್ಟಿಕ್‌.!

ಉಡುಪಿಯ ಸುಂದರ ಪ್ರವಾಸಿ ತಾಣ, ಮಣಿಪಾಲದ ಮಣ್ಣಪಳ್ಳ. ಸುಂದರ ಪ್ರಕೃತಿ ಸೌಂದರ್ಯ, ಸರೋವರ ಮತ್ತು ಗಿಡಮರಗಳ ಹಸಿರು ಹೊದಿಕೆಯ ಈ ತಾಣ ಉಡುಪಿ ಜನತೆಗೊಂದು ವರ. ದುರದೃಷ್ಟವಶಾತ್ ಕೆಲವೇ ಜನರು ಮಾಡುವ ತಪ್ಪಿನಿಂದಾಗಿ ಈಗ ಬಿಯರ್ ಬಾಟಲ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಈ ಪ್ರವಾಸಿ ತಾಣದ ಒಡಲು ಸೇರುತ್ತಿವೆ.

ಇದೀಗ ಮಳೆಗಾಲ. ಮಳೆಗಾಲದಲ್ಲಿ ಕಂಗೊಳಿಸಬೇಕಿದ್ದ ಮಣ್ಣಪಳ್ಳ ಪರಿಸರವು ಕೊಚ್ಚೆ, ಕೆಸರಿನ ಪರಿಸರ, ಗಿಡಗಂಟಿಗಳಿಂದ ಕೂಡಿದ ತಾಣವಾಗಿ ಮಾರ್ಪಾಡಾಗಿದೆ. ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಮಣ್ಣಪಳ್ಳದ ಒಡಲು ಸೇರುತ್ತಿರುವುದು ಆತಂಕಕಾರಿ. ಇಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡ ದೊಡ್ಡ ಕೆರೆಯನ್ನು ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿತ್ತು. ಸರೋವರದಲ್ಲಿ ವರ್ಷಪೂರ್ತಿ ಇರುವ ನೀರು ಕಣ್ಮನ ಸೆಳೆಯುತ್ತದೆ. ಮಣಿಪಾಲ, ಉಡುಪಿ ಸುತ್ತಮುತ್ತಲಿನ ಜನಕ್ಕೆ ಇಲ್ಲಿನ ವಾಯು ವಿಹಾರ ಅಚ್ಚುಮೆಚ್ಚು. ಪ್ರಸ್ತುತ ಮಣ್ಣಪಳ್ಳ ಕೆರೆ ನಿರ್ವಹಣೆ ಸಮಸ್ಯೆಯಿಂದ ಹಲವು ಸಮಸ್ಯೆಗಳು ಎದುರಾಗಿವೆ.

ಇಲ್ಲಿ ನೂರಾರು ಮೀಟರ್ ವಾಕಿಂಗ್ ಟ್ರ್ಯಾಕ್, ಸುಂದರ ಸರೋವರ ಇದೆ. ಆದರೆ ಗಿಡಗಂಟಿಗಳು ಬೆಳೆದಿದ್ದು ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಮಣಿಪಾಲ ಸುತ್ತಮುತ್ತಲ ಜನ ಇಲ್ಲಿಗೆ ಆಗಮಿಸುತ್ತಾರೆ. ಜೋಡಿಗಳು ಕೈಕೈ ಹಿಡಿದು ಈ ತಾಣದಲ್ಲಿ ವಿಹರಿಸುತ್ತಾರೆ. ಆದರೆ ಇತ್ತೀಚೆಗೆ ತ್ಯಾಜ್ಯ ರಾಶಿಗಳು ಅಲ್ಲಲ್ಲಿ ಹರಡಿ ಕೊಂಡಿವೆ. ಹಲವು ದಿನಗಳಿಂದ ಡಸ್ಟ್‌ಬಿನ್‌ಗಳಿಂದ ತ್ಯಾಜ್ಯ ತೆರವುಗೊಂಡಿಲ್ಲ. ಇಲ್ಲಿ ಯುವಕರ ಮದ್ಯ 'ಪಾರ್ಟಿ'ಯೂ ನಡೆಯುತ್ತಿದ್ದು, ಮದ್ಯ, ಬಿಯರ್‌ ಬಾಟಲಿಗಳು ಅಲ್ಲಲ್ಲಿ ಬಿದ್ದಿವೆ.

ಮಣ್ಣಪಳ್ಳಕ್ಕೆ ಸಂಪರ್ಕಿಸುವ ಮಳೆ ನೀರು ಕಾಲುವೆ ಮೂಲಕ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳು ಕೆರೆಗೆ ಸೇರುತ್ತಿದ್ದರೂ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಸುಂದರ ಪ್ರವಾಸಿತಾಣದ ನಿರ್ವಹಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಕರೆಗಟ್ಟಲೇ ಪ್ರದೇಶದ ಈ ತಾಣ ಪಾಳು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.

ವಿಶೇಷ ವರದಿ: ರಹೀಂ ಉಜಿರೆ

Edited By :
PublicNext

PublicNext

03/08/2022 04:15 pm

Cinque Terre

32.45 K

Cinque Terre

1

ಸಂಬಂಧಿತ ಸುದ್ದಿ