ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ ವಕೀಲರ ಸಂಘದಿಂದ ಪ್ರತಿಭಟನೆ

ಕುಂದಾಪುರ: ಜನನ-ಮರಣ ನೋಂದಣಿ ಪ್ರಕರಣಗಳನ್ನು ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವ ರಾಜ್ಯ ಸರಕಾರದ "ಅಧಿಸೂಚನೆ" ಯ ವಿರುದ್ಧ ವಕೀಲರಿಂದ ಪ್ರತಿಭಟನೆ ನಡೆಯಿತು. ಕುಂದಾಪುರ ಬಾರ್ ಅಸೋಸಿಯೇಷನ್‌ನ ಎದುರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯ್ತು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಹಿರಿಯ-ಕಿರಿಯ-ಮಹಿಳಾ ವಕೀಲರು ಪಾಲ್ಗೊಂಡು ಬಳಿಕ ಮನವಿ ಸಲ್ಲಿಸಿದರು. ಈ ಸಂದರ್ಭ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷರಾದ ಬೀನಾ ಜೊಸೆಫ್, ಕೋಶಾಧಿಕಾರಿ ಹಾಲಾಡಿ ದಿನಕರ್ ಕುಲಾಲ್ ಮತ್ತು ಜತೆ ಕಾರ್ಯದರ್ಶಿ ರಿತೇಶ್ ಬಿ. ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

05/08/2022 11:54 am

Cinque Terre

8.84 K

Cinque Terre

0

ಸಂಬಂಧಿತ ಸುದ್ದಿ