ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ʼಗೃಹರಕ್ಷಕ‌ ದಳದಿಂದ ಇನ್ ಫ್ಲೆಟೇಬಲ್ ಬೋಟ್ ಬಳಕೆʼ ಅಣಕು ಪ್ರದರ್ಶನ

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಹಾಗೂ ಪೌರ ರಕ್ಷಣಾ ತಂಡಕ್ಕೆ ಕೇಂದ್ರ ಕಚೇರಿಯಿಂದ ನೀಡಲಾಗಿರುವ 2 ಇನ್ ಫ್ಲೆಟೇಬಲ್ ಬೋಟ್ ಗಳ ಪ್ರಾಯೋಗಿಕ ಬಳಕೆ ಮತ್ತು ಅಣಕು ಪ್ರದರ್ಶನ (ಟ್ರಯಲ್ ರನ್ ) ಗುರುವಾರ ಕೂಳೂರು ಬಳಿಯ ಗುರುಪುರ ನದಿ ಹಿನ್ನೀರಿನಲ್ಲಿ ನಡೆಯಿತು.

ದ.ಕ. ಜಿಲ್ಲಾಡಳಿತ ಕಳೆದ ವರ್ಷ ಗೃಹರಕ್ಷಕ ದಳಕ್ಕೆ 3 ಇನ್ ಫ್ಲೆಟೇಬಲ್ ಬೋಟ್ ಗಳನ್ನು ನೀಡಿತ್ತು. ಇದೀಗ ಕೇಂದ್ರ ಕಚೇರಿಯಿಂದ ಮತ್ತೆ 2 ಬೋಟ್ ಗಳು ಸೇರ್ಪಡೆಯಾಗಿದೆ. ಗೃಹರಕ್ಷಕ ದಳದಲ್ಲಿ ಒಟ್ಟು 6 ಬೋಟ್ ಗಳಿದ್ದು, ಇವುಗಳು ಸುಬ್ರಹ್ಮಣ್ಯ, ಉಪ್ಪಿನಂಗಡಿ, ಬಂಟ್ವಾಳ, ಮುಲ್ಕಿಯಲ್ಲಿ ತಲಾ ಒಂದೊಂದು, ಮಂಗಳೂರಿನಲ್ಲಿ ಎರಡು ಕಾರ್ಯಾಚರಿಸುತ್ತಿದೆ.

ಈ ಬೋಟ್ ಗಳಲ್ಲಿ ನುರಿತ ಈಜುಪಟುಗಳು, ಚಾಲಕರು ಇರುತ್ತಾರೆ. ನೆರೆಯ ಸಂದರ್ಭ ಜಿಲ್ಲಾಧಿಕಾರಿಯವರ ಆದೇಶದಂತೆ ಅಗ್ನಿಶಾಮಕ ದಳದೊಂದಿಗೆ ಕಾರ್ಯಾಚರಣೆ ನಡೆಸಿ ಈ ಮೂಲಕ ಸಂಕಷ್ಟದಲ್ಲಿರುವ ಜನರು ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ಬಳಕೆ ಮಾಡಲಾಗುತ್ತದೆ ಎಂದು ಈ ಸಂದರ್ಭ ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಳಿಮೋಹನ ಚೂಂತಾರು ತಿಳಿಸಿದ್ದಾರೆ.

Edited By :
Kshetra Samachara

Kshetra Samachara

02/06/2022 11:04 pm

Cinque Terre

5.9 K

Cinque Terre

0

ಸಂಬಂಧಿತ ಸುದ್ದಿ