ಬೆಳ್ತಂಗಡಿ: ಕಳೆದ ಕೆಲ ದಿನಗಳಿಂದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ನದಿ ಸೇರಿದಂತೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಇನ್ನು ಭಾರೀ ಮಳೆ ಗಾಳಿಗೆ ಕೆಲ ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ಮಳೆಗೆ ಮಾಲಾಡಿ ಗ್ರಾಮದ ಶಕ್ತಿ ನಗರ ನಿವಾಸಿ ಕುಸುಮಾವತಿ ಧೂಮಪ್ಪ ಪೂಜಾರಿಯವರ ಮನೆ ಸಂಪೂರ್ಣ ಹಾನಿಗೊಂಡಿದೆ.
ಮನೆಯ ಮೇಲ್ಚಾವಣಿ ಬಹುತೇಕ ಕುಸಿದಿದ್ದು ಮನೆಯೊಳಗಿದ್ದ ವಸ್ತುಗಳಿಗೂ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ವಿಷಯ ಶಾಸಕ ಹರೀಶ್ ಪೂಂಜರವರಿಗೆ ತಿಳಿಯುತ್ತಿದ್ದಂತೆ ಶಾಸಕರು ತಕ್ಷಣವೇ ಸ್ಪಂದಿಸಿ ಆಪ್ತರ ಮುಖೇನ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕರ್ಕೇರ ಪಂಚಾಯತ್ ಸದಸ್ಯ ರಾಜೇಶ್ ರವರು ಉಪಸ್ಥಿತರಿದ್ದರು.
Kshetra Samachara
03/07/2022 09:46 pm